ರಾಮನಗರ: ಆಟೋ, ಟಿಪ್ಪರ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರು ಮಾಗಡಿ ರಾಜ್ಯ ಹೆದ್ದಾರಿ ತಾವರೆಕೆರೆಯ ಬಳಿಯ ಹೊನ್ನಗಾನಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಅಪಘಾತದ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.ಮೃತರನ್ನು ಕೊಟ್ಟಿಗೆಪಾಳ್ಯ ನಿವಾಸಿಗಳಾದ ಪುಷ್ಪಾ (27), ಚೆನ್ನಮ್ಮ (45), ಜ್ಯೋತಿ (29) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಕಾರು ಚಾಲಕ ಚೇತನ್ ಹಾಗೂ ಆಟೋ ಚಾಲಕ ಬಸಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಆಟೋ ಚಾಲಕನ ಅತಿವೇಗವೇ ಕಾರಣ ಎಂದು ತಿಳಿದು ಬಂದಿದೆ.ಇಂದು ಮಧ್ಯಾಹ್ನ 2.32ರ ಸಮಯ ಮಾಗಡಿ ರೋಡ್‍ನ ತಾವರೆಕೆರೆ ಬಳಿಯ ಹೊನ್ನಗಾನಹಟ್ಟಿ ಬಳಿ ಕೆಎ 02 2580 ನಂಬರ್ ನ ಆಟೋ ಅತಿವೇಗದಲ್ಲಿ ಬಂದ ಕಾರಣ ನಿಯಂತ್ರಣ ತಪ್ಪಿ ಲೋಡ್ ತುಂಬಿದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಿಪ್ಪರ್ ನಿಯಂತ್ರಣ ಕಳೆದುಕೊಂಡು ಕೆಎ 04 ಎಲ್‍ಡಿ 5625  ನಂ.  ಆಲ್ಟೋ ಕಾರಿನ ಮೇಲೆ ಬಿದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.ಘಟನೆಯಲ್ಲಿ ಮೃತಪಟ್ಟ ಪುಷ್ಪಾ ಅವರ ಬಳಿ ಜ್ಯೋತಿ ಹಾಗೂ ಚೆನ್ನಮ್ಮ ಚೇತನ್ ಹರ್ಬಲೈಫ್ ಡಿಸ್ಟ್ರಿಬ್ಯೂಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಾಗಡಿಗೆ ವಸ್ತು ಗಳನ್ನು ಕೊಟ್ಟು ಬರಲು ತೆರಳಿದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ.Sign in to your account
Username or Email Address


Password

 Remember Me


