ಮೈಸೂರು: ಯುವತಿಯನ್ನು ಪ್ರೀತಿಸಿ ಆಕೆಗೆ ಕೈಕೊಡಲು ಮುಂದಾಗಿದ್ದ ಪ್ರಿಯಕರನನ್ನು ಗ್ರಾಮಸ್ಥರು ಸೇರಿ ಎಳೆತಂದು ಮದುವೆ ಮಾಡಿಸಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ನಡೆದಿದೆ.ಒಂದೇ ಗ್ರಾಮದವರಾಗಿದ್ದ ರೇಣುಕುಮಾರ್ ಮತ್ತು ರೋಜಾ ಇಬ್ಬರು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ರೇಣುಕುಮಾರ್ ಕೆಎಸ್‍ಆರ್ ಟಿಸಿ ಬಸ್ ಚಾಲಕನಾಗಿ ಹಾಗೂ ರೋಜಾ ಟಿ.ನರಸೀಪುರ ತಾಲೂಕು ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಪ್ರೀತಿಸುತ್ತಿದ್ದ ವಿಚಾರ ಊರಿನವರಿಗೂ ತಿಳಿದಿತ್ತು.ಈ ಸಂದರ್ಭದಲ್ಲಿ ಇತ್ತೀಚೆಗೆ ರೇಣುಕುಮಾರ್ ರೋಜಾರನ್ನು ಮಾತನಾಡಿಸದೇ ದೂರ ಮಾಡಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೆ ಹಣ ನೀಡಿ ಬೇರೆ ಮದುವೆಯಾಗಲು ಹೇಳಿದ್ದ. ಈ ಮಧ್ಯೆ ಈತ ಬೇರೆ ಹುಡುಗಿ ಜೊತೆ ಮದುವೆಯಾಗಲು ಮುಂದಾಗಿದ್ದ. ಈ ಎಲ್ಲಾ ವಿಚಾರಗಳನ್ನು ತಿಳಿದ ಗ್ರಾಮಸ್ಥರು ಗುರುವಾರ ರೇಣುಕುಮಾರ್‍ನನ್ನು ಕರೆದು ಮಾತನಾಡಲು ನಿರ್ಧಾರ ಮಾಡಿದ್ದರು.ರೇಣುಕುಮಾರ್ ಈ ವಿಚಾರವನ್ನು ತಿಳಿದು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಗ್ರಾಮಸ್ಥರೆಲ್ಲಾ ಸೇರಿ ಆತನನ್ನು ಎಳೆದುತಂದು ಇಂದು ಕಾರಗಳ್ಳಿ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. Sign in to your account
Username or Email Address


Password

 Remember Me


