ದಾವಣಗೆರೆ: ಅಂಗನವಾಡಿ ಧಾನ್ಯ ಕಳ್ಳತನ ಮಾಡುತ್ತಿದ್ದವರನ್ನ ಗ್ರಾಮಸ್ಥರೇ ಹಿಡಿದು ಕೂಡಿಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿಯಲ್ಲಿ ನಡೆದಿದೆ.   ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಹಾಗೂ ಖಾಸಗಿ ವ್ಯಕ್ತಿಯ ಆಟೋವನ್ನ ಹಿಡಿದಿದ್ದು, ಮೂವರನ್ನೂ ಅಂಗನವಾಡಿಯಲ್ಲಿ ಕೂಡಿ ಹಾಕಿದ್ದಾರೆ. ಹಲವು ದಿನಗಳಿಂದ ಅಂಗನವಾಡಿಯಲ್ಲಿದ್ದ ಪಡಿತರವನ್ನು ಮಕ್ಕಳಿಗೆ ಕೊಡದೇ ಬೇರೆಡೆಗೆ ಸಾಗಿಸುತ್ತಿದ್ದರು. ಇಂದು ಬೆಳಗ್ಗಿನ ಜಾವ ಅಕ್ಕಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಸಾಗಿಸುತ್ತಿರುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಘಟನೆ ಬಗ್ಗೆ ವಿಷಯ ತಿಳಿಸಿದ್ರೂ ಇದುವರೆಗೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


