ಕೋಲಾರ: ಮೇಕೆಯೊಂದು 6 ಮರಿಗಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕನ್ನಸಂದ್ರ ಗ್ರಾಮದಲ್ಲಿ ನಡೆದಿದೆ.ಕನ್ನಸಂದ್ರ ಗ್ರಾಮದ ನಿವಾಸಿ ರೈತ ಸುಬ್ಬಣ್ಣ ಎಂಬುವರಿಗೆ ಸೇರಿದ ಮೇಕೆ ಇಂದು ಮುಂಜಾನೆ ಆರು ಮೇಕೆ ಮರಿಗಳಿಗೆ ಜನ್ಮ ನೀಡಿದೆ. ಮೇಕೆ ಆರು ಮರಿಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದರಿಂದ ಅಪರೂಪ ಎಂಬಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೇಕೆ ಮರಿಗಳನ್ನ ನೋಡಲು ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ.ಸಾಮಾನ್ಯವಾಗಿ ಮೇಕೆ 2 ಅಥವಾ 3 ಮರಿಗಳಿಗೆ ಜನ್ಮ ನೀಡುತ್ತದೆ. ಆದರೆ ಈ ಮೇಕೆ 6 ಮರಿಗಳಿಗೆ ಜನ್ಮ ನೀಡಿದೆ. ಜನ್ಮ ನೀಡಿದ ಮರಿಗಳಲ್ಲಿ ನಾಲ್ಕು ಹೆಣ್ಣು ಹಾಗೂ ಎರಡು ಗಂಡು ಮರಿಗಳಾಗಿದ್ದು, ಆರು ಮರಿಗಳಿಗೆ ಜನ್ಮ ನೀಡಿರುವುದು ಅಚ್ಚರಿಯ ಸಂಗತಿಯಾಗಿದೆ.ಆರು ಮರಿಗಳಿಗೆ ಜನ್ಮ ನೀಡಿದ್ದರಿಂದ ಸುಬ್ಬಣ್ಣ ಪಶು ವೈದ್ಯರಿಗೆ ತಿಳಿಸಿ ಪರೀಕ್ಷೆ ಮಾಡಲು ಕರೆದುಕೊಂಡು ಬಂದಿದ್ದಾರೆ. ವೈದ್ಯರು ಸದ್ಯಕ್ಕೆ ಮೇಕೆ ಸೇರಿದಂತೆ ಎಲ್ಲಾ ಆರು ಮೇಕೆ ಮರಿಗಳು ಆರೋಗ್ಯವಾಗಿವೆ ಎಂದು ದೃಢಪಡಿಸಿದ್ದಾರೆ. 






 Advertisement 




Sign in to your account
Username or Email Address


Password

 Remember Me


