ರಾಯಚೂರು: ಸುಳ್ಳಿಗೆ ನೊಬೆಲ್ ಪ್ರಶಸ್ತಿ ಕೊಡೋದಾದ್ರೆ ಸುಳ್ಳಿನ ಸರದಾರ ಸಿದ್ದರಾಮಯ್ಯಗೆ ಕೊಡಬೇಕು ಅಂತ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.ರಾಯಚೂರಿನ ಮಾನ್ವಿಯಲ್ಲಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಈಶ್ವರಪ್ಪ, ಸರ್ಕಾರದ ದುಡ್ಡಲ್ಲಿ ಸಿದ್ದರಾಮಯ್ಯ ಯಾತ್ರೆ ಹೊರಟಿದ್ದಾರೆ. 30 ದಿನ 30 ಸಾವಿರ ಕೋಟಿ ಸುರಿಯುತ್ತಿದ್ದಾರೆ. ಸಿದ್ದರಾಮಯ್ಯ ಹೊಸ ನಾಟಕ ಶುರು ಮಾಡಿದ್ದಾರೆ. ಸುಳ್ಳಿಗೆ ನೊಬೆಲ್ ಪ್ರಶಸ್ತಿ ಕೊಡೋದಾದ್ರೆ ಸುಳ್ಳಿನ ಸರದಾರ ಸಿದ್ದರಾಮಯ್ಯಗೆ ಕೊಡಬೇಕು ಅಂತ ಹೇಳಿದ್ರು.165 ರಲ್ಲಿ 160 ಭರವಸೆಗಳನ್ನ ಮುಗಿಸಿದ್ದೇವೆ ಅಂತ ಹೇಳುತ್ತಿದ್ದಾರೆ. ದಲಿತರನ್ನ, ಅಮಾಕರನ್ನ ಮುಗಿಸಿಬಿಟ್ಟಿದ್ದಾರೆ. ಹಿಂದುಳಿದ ದಲಿತರ ಲ್ಯಾಪ್‍ಟಾಪ್, ಹಾಸ್ಟೆಲ್ ಹಾಸಿಗೆ ದುಡ್ಡನ್ನೇ ಹೊಡೆದ್ರು. ಹಿಂದುಳಿದವರಿಗೆ, ದಲಿತರಿಗೆ ಯಡಿಯೂರಪ್ಪ ಏನ್ ಮಾಡಿದ್ದಾರೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ವಿದ್ಯಾಸಿರಿ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ರೂಪಾಯಿ ಕೊಟ್ಟಿಲ್ಲ. ಕೊಟ್ಟಿದ್ದೀರಾ ಅನ್ನೋದಾದ್ರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಅಂದ್ರು.ಒಂದಾಗಿದ್ದ ವೀರಶೈವ ಲಿಂಗಾಯತರನ್ನ ಒಡೆದು ಛಿದ್ರ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ 20 ಜನ ಹಿಂದೂಗಳ ಕೊಲೆಯಾಗಿದೆ. ದೇವೇಗೌಡ್ರಿಗೆ ಟೋಪಿ ಹಾಕಿ ಇತ್ತೀಚಿಗೆ ಕಾಂಗ್ರೆಸ್ ಸೇರಿದ್ದೀರಿ. ನೆಹರು ರಿಂದ ರಾಹುಲ್ ಗಾಂಧಿವರೆಗೂ ನಮ್ಮನ್ನೇನೂ ಮಾಡಲು ಆಗಿಲ್ಲ. ಸಿದ್ದರಾಮಯ್ಯ ನೀವೂ ನಮ್ಮನ್ನು ಏನು ಮಾಡಲು ಆಗಲ್ಲ ಅಂತ ಹೇಳಿದ್ರು.Sign in to your account
Username or Email Address


Password

 Remember Me


