ಮೈಸೂರು: ನಗರದ ಬಡಾವಣೆಯೊಂದರಲ್ಲಿ ಬಿಚ್ಚಿಟ್ಟಿದ್ದ ಶೂನಲ್ಲಿ ನಾಗರಹಾವು ಒಂದು ಸೇರಿಕೊಂಡಿದ್ದು, ಶೂ ಧರಿಸಲು ಬಂದ ವ್ಯಕ್ತಿ ಸ್ಪಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪರಾರಿಗಿರುವ ಘಟನೆ ನಡೆದಿದೆ.ಮೈಸೂರಿನ ಆರ್ ಎಂಪಿ ಬಡಾವಣೆಯ ಮಹೇಶ್ ಎಂಬುವರು ಸಂಜೆ ತಮ್ಮ ಶೂವನ್ನು ಮನೆಯ ಹೊರಗಡೆ ಬಿಟ್ಟು ತೆರಳಿದ್ದು, ರಾತ್ರೋರಾತ್ರಿ ಶೂ ಒಳಗೆ ನಾಗರ ಹಾವು ಬಂದು ಸೇರಿಕೊಂಡಿತ್ತು.ಈ ವೇಳೆ ಎಂದಿನಂತೇ ಮಹೇಶ್ ಅವರು ಶೂ ಧರಿಸಲು ಕೈಗೆತ್ತಿ ಗೊಂಡಾಗ ನಾಗರ ಹಾವು ಕಂಡು ತಬ್ಬಿಬ್ಬಾಗಿದ್ದಾರೆ. ತಕ್ಷಣ ಉರಗತಜ್ಞ ಕೆಂಪರಾಜು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ನಾಗರ ಹಾವನ್ನು ಹಿಡಿದು ರಕ್ಷಿಸಿ, ಆತಂಕವನ್ನು ದೂರ ಮಾಡಿದ್ದಾರೆ.Sign in to your account
Username or Email Address


Password

 Remember Me


