ಉಡುಪಿ: ಭಿನ್ನ ಕೋಮಿನ ಆರು ಯುವಕ-ಯುವತಿಯರಿಂದ ಬೀಚ್‍ ನಲ್ಲಿ ಬರ್ತ್ ಡೇ ಪಾರ್ಟಿ ನಡೆಯುವಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಪೋಷಕರೇ ಯುವಕರಿಗೆ ಏಟು ನೀಡಿದ ಘಟನೆ ಉಡುಪಿಯ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ನಡೆದಿದೆ.ಬೀಚ್ ನಲ್ಲಿ ಬರ್ತ್ ಡೇ ಪಾರ್ಟಿ ನೆಪದಲ್ಲಿ ಅನುಚಿತ ವರ್ತನೆ ತೋರಿದ ಯುವಕ-ಯುವತಿಯರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಉಡುಪಿ ಮತ್ತು ಶೃಂಗೇರಿಯ ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದು, ಪೋಷಕರೇ ಏಟು ನೀಡಿದ್ದಾರೆ.ಈ ನಡುವೆ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಸಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಮೂವರು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಮುಚ್ಚಳಿಕೆ ಬರೆಸಿ ಪೋಷಕರ ಜೊತೆ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ. ಇದೇ ವೇಳೆ ಬೀಚ್ ನಲ್ಲಿ ಅನುಚಿತ ವರ್ತನೆಗೆ ಅವಕಾಶ ಕೊಡಬೇಡಿ ಎಂದು ಸ್ಥಳೀಯರು ಒತ್ತಾಯಿಸಿದ್ರು.Sign in to your account
Username or Email Address


Password

 Remember Me


