ದಾವಣಗೆರೆ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಆಟೋ ಹತ್ತುವಂತೆ ಚುಡಾಯಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಆಟೋದಲ್ಲಿ ಬಂದ ನಾಲ್ವರು ಯುವಕರು ಚುಡಾಯಿಸಿ ಆಟೋ ಏರುವಂತೆ ಕಾಟ ಕೊಟ್ಟಿದ್ದಾರೆ. ಪ್ರಶ್ನಿಸಿದ ಲಿಂಗದಹಳ್ಳಿ ಗ್ರಾಮಸ್ಥರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ನಂತರ ಗ್ರಾಮಸ್ಥರೆಲ್ಲ ಬಂದಾಗ ಯುವಕರನ್ನು ಹಿಡಿಯಲು ಹೋದಾಗ ಆಟೋದಲ್ಲಿದ್ದ ನಿಟ್ಟುವಳ್ಳಿಯ ಅರುಣ್, ಗಣೇಶ್, ಫಯಾಜ್ ಪರಾರಿಯಾಗಿದ್ದಾರೆ.ಪುಂಡರ ಜೊತೆಗಿದ್ದ ಚಂದ್ರು ಮಾತ್ರ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ರೋಡ್ ರೊಮಿಯೋ ಚಂದ್ರನಿಗೆ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಅಲ್ಲದೇ ಮದ್ಯಪಾನ ಸೇವನೆ ಮಾಡಿ ಆಟೋದಲ್ಲಿ ಲಿಂಗದಹಳ್ಳಿ ಗ್ರಾಮಕ್ಕೆ ಯುವಕರು ಬಂದಿದ್ದರು ಎಣ್ಣೆ ಗುಂಗಿನಲ್ಲಿ ಈ ರೀತಿಯಾಯಿತ್ತು ಎನ್ನುತ್ತಿದ್ದಾರೆ ಪುಂಡರು.ಇನ್ನು ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


