ಹಾವೇರಿ: ಆಸ್ತಿಯಲ್ಲಿ ತನ್ನ ಪಾಲು ಬೇಕು ಎಂದು ಆಗ್ರಹಿಸಿ, ಮೊಬೈಲ್ ಟವರ್ ಏರಿ ಕುಳಿತು ಯುವಕ ಪ್ರತಿಭಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ.ಮೊಬೈಲ್ ಟವರ್ ಏರಿದ ಯುವಕನನ್ನ ಯಲ್ಲಪ್ಪ ದೊಡ್ಡಲಿಂಗಣ್ಣವರ(34) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರದಲ್ಲಿ ದೊಡ್ಡಪ್ಪ ಮತ್ತು ಚಿಕ್ಕಪ್ಪ ಕಿರುಕುಳ ನೀಡುತ್ತಿದ್ದಾರೆ. ನಮಗೆ ಸೇರಬೇಕಾದ ಆಸ್ತಿಯನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪಂದಿರಾದ ಶ್ರೀಪತಿ, ಶಿವಪ್ಪ ಮತ್ತು ಚಿಕ್ಕಪ್ಪ ಮಾರುತಿ ಕಸೆದುಕೊಂಡಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ.ಸ್ಥಳಕ್ಕೆ ಹಾನಗಲ್ ತಹಶೀಲ್ದಾರ ಬಂದು ನ್ಯಾಯ ಕೊಡಿಸೋವರೆಗೂ ಟವರ್ ನಿಂದ ಕೆಳಗಿಳಿಯೋದಿಲ್ಲ ಎಂದು ಯಲ್ಲಪ್ಪ ಹಠ ಹಿಡಿದಿದ್ದಾರೆ. ಸದ್ಯ ಸ್ಥಳೀಯರು ಟವರ್ ನಿಂದ ಕೆಳಗೆ ಇಳಿಯುವಂತೆ ಯುವಕನಿಗೆ ಮನವೊಲಿಸುತ್ತಿದ್ದಾರೆ.ಸ್ಥಳಕ್ಕೆ ಆಡೂರು ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


