ಬೆಳಗಾವಿ: ನಿರ್ಜನ ಪ್ರದೇಶದಲ್ಲಿ ಓಡಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ, ಅವರಿಗೆ ಕೀಟಲೆ ಕೊಟ್ಟು, ಹಣ, ಆಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬೆಳಗಾವಿಯ ಪೊಲೀಸರು ಬಂಧಿಸಿದ್ದಾರೆ.ಮಹ್ಮದ್, ಜಾವೀದ್, ಮೊಹ್ಮದ್, ಶಾರೂಕ್, ರಹಿಮ್ ಬಂಧಿತ ಆರೋಪಿಗಳಾಗಿದ್ದು, ಬೆಳಗಾವಿಯ ಕ್ಯಾಂಪ್ ಪೊಲೀಸರು ಈ 5 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ಆರಂಭಿಸಿದ್ದಾರೆ.ನಗರದ ಸಿಪಿಎಡ್ ಮೈದಾನ, ಕ್ಯಾಂಪ್ ಪ್ರದೇಶದಲ್ಲಿ ಇರುವ ಪಾರ್ಕ್ ಬಳಿ ಪ್ರೇಮಿಗಳು ಹೆಚ್ಚು ಭೇಟಿ ನೀಡುತ್ತಾರೆ. ಹೀಗೆ ಬರುವ ಜೋಡಿಗಳನ್ನು ಟಾರ್ಗೆಟ್ ಮಾಡಿ ಚಾಕು ತೋರಿಸಿ ಬೆದರಿಸಿ ಅವರಿಂದ ಹಣ, ಆಭರಣವನ್ನು ಆರೋಪಿಗಳು ವಸೂಲಿ ಮಾಡುತ್ತಿದ್ದರು.ಪೋಷಕರ ಕಣ್ಣು ತಪ್ಪಿಸಿ ಅಥವಾ ಮಾನಕ್ಕೆ ಹೆದರಿ ಇದುವರೆಗೂ ಪ್ರೇಮಿಗಳು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಇತ್ತೀಚಿಗೆ ಈ ಕುರಿತು ದೂರು ದಾಖಲಾಗಿದ್ದು, ಈ ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


