ರಾಯಚೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌಲ್ವಿ ಬಾಬಾ ಅಂತಲೇ ಕರೆಯುತ್ತೇವೆ. ಮನಮೋಹನ್ ಸಿಂಗ್ ಅವರು ನ್ಯೂಟ್ರಲ್ ಗೇರ್ ಇದ್ದ ಹಾಗೆ. ನರೆಂದ್ರ ಮೋದಿ ಟಾಪ್ ಗೇರ್, ಇನ್ನು ಸಿದ್ದರಾಮಯ್ಯ ರಿವರ್ಸ್ ಗೇರ್ ಇದ್ದ ಹಾಗೆ ಅಂತ ಸಚಿವ ಅನಂತ್ ಕುಮಾರ್ ಗೇಲಿ ಮಾಡಿದ್ದಾರೆ.ರಾಯಚೂರಿನ ದೇವದುರ್ಗದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಚ್ಚು, ಲಾಂಗ್, ಪಿಸ್ತೂಲಿನ ರಾಜ್ಯ ಭಾರ ನಡೆಯುತ್ತಿದೆ. ಸರ್ಕಾರದ ವೈಫಲ್ಯದಿಂದ ಕರಾವಳಿಯಲ್ಲಿ ಪರೇಶ್ ಮೇಸ್ತಾ ಅನ್ನೋ ಅಮಾಯಕನ ಕಗ್ಗೊಲೆಯಾಗಿದೆ ಅಂದ್ರು.ನಿಮ್ಮ ಸಿಓಡಿ, ಪೊಲೀಸ್ ಏನೂ ಕೆಲಸ ಮಾಡುತ್ತಿಲ್ಲ. ಪ್ರಕರಣವನ್ನ ಸಿಬಿಐಗೆ ಕೊಟ್ಟರೇನೇ ಸರಿಯಾದ ತನಿಖೆ ನಡೆಯಲು ಸಾಧ್ಯ ಎಂದ ಅವರು, ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಬೇಕಾಗಿದೆ ಎಂದರು. Sign in to your account
Username or Email Address


Password

 Remember Me


