ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 19 ವರ್ಷದ ಯುವಕ ಪರೇಶ್ ಮೇಸ್ತಾ ನಿಗೂಢ ಸಾವಿನ ಕುರಿತ ಸ್ಫೋಟಕ ಮಾಹಿತಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ಪರೇಶ್ ತಂದೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.ಪಬ್ಲಿಕ್ ಟಿವಿ ಜೊತೆಗೆ ಮಾತಾಡಿದ ತಂದೆ ಕಮಲಾಕರ್ ಮೇಸ್ತಾ, ನನ್ನ ಮಗನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ವಿಷವುಣಿಸಿ ಹಲ್ಲೆಗೈದು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಾಲು ಜಾರಿ ಬಿದ್ದು ಸತ್ತಿದ್ದಾನೆಂಬ ಪೊಲೀಸರ ಹೇಳಿಕೆ ಸರಿಯಲ್ಲ. ನಮ್ಮ ಮಗನಿಗೆ ಈಜು ಬರುತ್ತಿತ್ತು ಅಂತಾ ಪರೇಶ್ ಮೆಸ್ತಾ ತಂದೆ ಹೇಳಿದ್ದಾರೆ.ನನ್ನ ಮಗ 6ನೇ ತಾರೀಖು ಕಾಣೆಯಾದ. ಎಲ್ಲಾ ಕಡೆ ಹುಡುಕಿ ನಂತರ ಪೊಲೀಸರಿಗೆ ದೂರು ಕೊಟ್ಟಿದ್ವಿ. ನಂತರ ಶನೀಶ್ವರ ದೇವಸ್ಥಾನದ ಹಿಂದೆ ಶೆಟ್ಟಿ ಕೆರೆಯಲ್ಲಿ ಮಗನ ಶವ ತೇಲುತ್ತಿತ್ತು ಅಂತ ಹೇಳಿದ್ರು. ಮುಖ ನೋಡಿದಾಗ ಕಪ್ಪಾಗಿದ್ದು, ಮುಖ ಜಜ್ಜಿತ್ತು, ಕಣ್ಣು ಗೆಡ್ಡೆ ಕಿತ್ತು ಬಂದಿತ್ತು. ಕಿಡ್ನ್ಯಾಪ್ ಮಾಡಿ ಸಾಯಿಸಿರೋದು ನೂರಕ್ಕೆ ನೂರು ಸತ್ಯ. ಇದಕ್ಕೆ ಪೊಲೀಸ್ ಇಲಾಖೆಯ ಕುಮ್ಮಕ್ಕೂ ಇದೆ. ನನ್ನ ಮಗನಿಗೆ ನ್ಯಾಯ ಸಿಗಬೇಕು. ಪ್ರಕರಣದ ತನಿಖೆಯನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಹೇಳಿದ್ರು. https://www.youtube.com/watch?v=5XVX-SyTRAI&feature=youtu.beSign in to your account
Username or Email Address


Password

 Remember Me


