ಬೆಳಗಾವಿ: ಸಿಎಂ ಸಿದ್ದರಾಮಯ್ಯನದ್ದು ರಾಕ್ಷಸ ಮುಖವಿದೆ. ಕಾಂಗ್ರೆಸ್‍ನವರು ಮೊದಲು ತಮ್ಮ ಮುಖ ಕನ್ನಡಿಯಲ್ಲಿ ನೋಡಿಕೋಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನವರ ಮುಖ ರಾಕ್ಷಸ ಮುಖವೋ, ಮನುಷ್ಯನ ಮುಖವೊ ಗೊತ್ತಾಗುತ್ತೆ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಅವರು, ಪರೇಶ್‍ನನ್ನ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ. ಉತ್ತರ ಕರ್ನಾಟಕ ಜನ ಶಾಂತಿಪ್ರಿಯರು. ಪರೇಶ್ ಸಾವು ಮಾನವೀಯತೆಯ ಕಗ್ಗೊಲೆ. ವ್ಯವಸ್ಥಿತವಾಗಿ ಕೇಸ್ ಮುಚ್ಚಿ ಹಾಕಲಾಗುತ್ತಿದೆ. ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ಸಿಗಿಲ್ಲ. ಇದು ಅಲ್ಪಸಂಖ್ಯಾರ ಮತಗಳ ತುಷ್ಠಿಕರಣ. ಅಲ್ಲಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಅಂತ ಕಿಡಿ ಕಾರಿದ್ರು.ಸಿಪಿಐ, ಪಿಎಸ್‍ಐ ಪೊಲೀಸ್ ಅಧಿಕಾರಿಗಳು ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ. ರಾಜ್ಯದಲ್ಲಿ ಪರೇಶ್ ಸೇರಿ 20 ಜನರ ಕಗ್ಗೊಲೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ರು.Sign in to your account
Username or Email Address


Password

 Remember Me


