ಬೆಂಗಳೂರು: ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಈಗ ಜೈಲು ಪಾಲಾಗಿದ್ದಾರೆ.ಸಿಸಿಬಿ ಕಚೇರಿಯಲ್ಲೇ ಮೂರು ದಿನ ಕಳೆದಿದ್ದ ರವಿ ಬೆಳೆಗೆರೆಯನ್ನು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಎಸಿಎಂಎಂ ಕೋರ್ಟ್‍ಗೆ ಪೊಲೀಸರು ಹಾಜರುಪಡಿಸಿದರು. ವಿಚಾರಣೆ ಬಳಿಕ ನ್ಯಾಯಾಧೀಶ ಜಗದೀಶ್ ಬೆಳಗೆರೆಗೆ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟ ಮಾಡಿದರು.ಬಿಪಿ, ಶುಗರ್ ಇದ್ದು ಪ್ರತಿ ದಿನ  ಇಂಜೆಕ್ಷನ್, ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ರವಿ ಪರ ವಕೀಲರು ಹೇಳಿದರೂ ಕೋರ್ಟ್ ಆರೋಗ್ಯ ಸಮಸ್ಯೆಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸೂಚಿಸಿತು.ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದನ್ನು ನೋಡಿ ರವಿ ಬೆಳಗೆರೆ ಪೊಲೀಸ್ ಜೀಪಿನಲ್ಲೇ ಕಣ್ಣೀರು ಹಾಕಿದರು. ಪೊಲೀಸರು ಈಗ ಬೆಳಗೆರೆಯನ್ನು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.Sign in to your account
Username or Email Address


Password

 Remember Me


