ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಬಿದ್ದಿರುವ ಘಟನೆ ನಗರದ ಹನುಮಂತನಗರದ ಜಿಂಕೆ ಪಾರ್ಕ ಬಳಿ ನಡೆದಿದೆ.ಭಾನುವಾರ ರಾತ್ರಿ 12ಗಂಟೆ ಸುಮಾರಿಗೆ ಹೂಕೋಸು ತುಂಬಿದ ಲಾರಿಯೊಂದು ಹನುಮಂತನಗರದಿಂದ ಕೆಆರ್ ಮಾರ್ಕೆಟ್ ಕಡೆ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿ ಲಾರಿ ಪಲ್ಟಿ ಹೊಡೆದಿದೆ.ಲಾರಿ ಬಿದ್ದ ಪರಿಣಾಮ ಲೋಡ್ ಆಗಿದ್ದ ಹೂ ಕೋಸು ರಸ್ತೆಯಲ್ಲಿ ಬಿದ್ದಿದೆ. ಹೀಗಾಗಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಈ ಕುರಿತು ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


