ಬೆಂಗಳೂರು: ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ, ಸಿಸಿಬಿ ವಶದಲ್ಲಿದ್ದುಕೊಂಡೇ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.ಭಾನುವಾರ ರಾತ್ರಿ ಸುಮಾರು 9.40ರ ವೇಳೆಗೆ ಮಧು ಎಂಬಾತ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ. ಸುನಿಲ್ ರಿಸೀವ್ ಮಾಡಿದಾಗ ಕರೆ ಮಾಡಿದ್ದ ಮಧು ಎಂಬಾತ ರವಿ ಬೆಳೆಗೆರೆಯವರಿಗೆ ಫೋನ್ ಕೊಟ್ಟಿದ್ದಾನೆ. ಈ ವೇಳೆ ಸುನಿಲ್ ಜೊತೆ ಮಾತನಾಡಿದ ರವಿ ಬೆಳಗೆರೆ, ಯಶೋಮತಿ ಜೊತೆ ಸಂಬಂಧ ಇದೆ ಅಂತಾ ಮಾಧ್ಯಮಗಳ ಮುಂದೆ ಹೇಳಿದ್ದೀಯಾ? ಅಂತಾ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುನಿಲ್ , ನನಗೆ ಯಶೋಮತಿ ಜೊತೆ ಸಂಬಂಧವಿಲ್ಲ. ಹೀಗಿದ್ದಾಗ ನಾನ್ ಯಾಕೆ ಹಾಗೆ ಹೇಳಲಿ? ಅಂತಾ ಪ್ರಶ್ನಿಸಿದ್ದಾರೆ.ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ, ಸಿಸಿಬಿ ಕಚೇರಿಯಿಂದ ನಮ್ಮ ತಂದೆ ಕರೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸುನಿಲ್ ಹೆಗ್ಗರವಳ್ಳಿಯವರೂ ದೂರು ನೀಡಲಿ. ನಾವೂ ದೂರು ನೀಡುತ್ತೇವೆ. ನಮ್ಮ ತಂದೆಗೆ ಬೇಲ್ ಸಿಗದಂತೆ ಮಾಡಲು ಮತ್ತೊಂದು ಷಡ್ಯಂತ್ರ ರಚಿಸಿದ್ದಾರೆ ಎಂದಿದ್ದಾರೆ.ನನಗೆ ಏನೇ ಆದರೂ ರವಿ ಬೆಳಗೆರೆ ಅವರೇ ಕಾರಣ ಅಂತ ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ. ಸಿಸಿಬಿ ಕಚೇರಿಯಿಂದ ಕರೆ ಮಾಡುವ ಮೂಲಕ ತಾನು ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಯಶೋಮತಿ ನನ್ನ ಗೆಳತಿಯಷ್ಟೇ. ಎಲ್ಲರೂ ರವಿ ಬೆಳಗೆರೆಯಂತೆ ಇರಲು ಆಗುತ್ತಾ? ಅವರಿಗಾದರೂ ಹತ್ತಾರು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ ಅಂತಾ ಸುನಿಲ್ ಹೇಳಿದ್ದಾರೆ. Sign in to your account
Username or Email Address


Password

 Remember Me


