ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರಿಗೆ ಸವಾಲು ಹಾಕಿದ್ದಾರೆ.ವರುಣಾ ಕ್ಷೇತ್ರಕ್ಕೆ ನಾನು ಹೋಗಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ನಡುಕ ಶುರುವಾಗಿದೆ ಅನ್ನೊ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟಾಂಗ್ ನೀಡಿದ ಸಿಎಂ, ಸದಾನಂದಗೌಡರಿಗೆ ವರುಣಾ ಕ್ಷೇತ್ರವೇ ಗೊತ್ತಿಲ್ಲ. ಸುಮ್ಮನೆ ಏನೇನೋ ಮಾತಾಡ್ತಾರೆ. ನಾನು ಈ ಬಾರಿ ಅಲ್ಲಿ ನಿಲ್ಲುತ್ತಿಲ್ಲ. ನನ್ನ ಮಗ ಅಲ್ಲಿ ಸ್ಪರ್ಧಿಸುತ್ತಾನೆ ಅಂತ ಹೇಳಿದ್ರು.ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರಿಗೆ ಸಿಎಂ ಸವಾಲ್!ನನ್ನ ಮಗನ ವಿರುದ್ಧ ಸದಾನಂದಗೌಡ ನಿಲ್ಲಲಿ. ಕಳೆದ ಬಾರಿ 32 ಸಾವಿರ ಓಟ್ ಗಳಿಂದ ಗೆದ್ದಿದ್ದೆ. ಬಿಜೆಪಿ ಅಲ್ಲಿ ಗೆಲ್ಲೋಕೆ ಸಾಧ್ಯಾನಾ? ಅಷ್ಟು ಸುಲಭನಾ? ಅವರಿಗೆ ಉಸ್ತುವಾರಿ ಕೊಟ್ಟರೆ ಎಲ್ಲ ಜನ ಬದಲಾವಣೆ ಆಗುತ್ತಾ? ನಾನು ಯಾರಿಗೂ ಭಯ ಬಿಳೊಲ್ಲ. ಸುಮ್ಮನೆ ಭಾಷಣ ಬಿಗಿಯೋದು ಅಲ್ಲ. ಸದಾನಂದಗೌಡರೇ ಸ್ಪರ್ಧೆ ಮಾಡಲಿ. ಬೇರೆಯವರನ್ನ ನಿಲ್ಲಿಸಿ ಬಲಿಕೊಡೋದಕ್ಕಿಂತ ಸದಾನಂದಗೌಡರೇ ವರುಣಾ ಕೇತ್ರದಿಂದ ನಿಲ್ಲಲಿ ಅಂತ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ನಾವು ಮಾಡಿರೋ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ: ಶೆಟ್ಟರ್‍ಗೆ ಸಿಎಂ ಸವಾಲ್Sign in to your account
Username or Email Address


Password

 Remember Me


