ಬೆಂಗಳೂರು: ಸಹೋದ್ಯೋಗಿ, ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಆರೋಪದ ಮೇಲೆ ರವಿಬೆಳಗೆರೆ ಬಂಧನವಾಗಿದ್ದು, ಈ ಬೆನ್ನಲ್ಲೇ ರವಿಬೆಳಗೆರೆ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.ರವಿ ಹತ್ಯೆಗೆ ಸ್ವಾಮೀಜಿ ಹಾಗೂ ಸಂಪಾದಕರೊಬ್ಬರಿಂದ ಸುಪಾರಿ ನೀಡಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ತ್ಯಾಗಿ ಎಂಬವರಿಂದ ಈ ಸುಪಾರಿ ಸಂಚಿನ ಬಗ್ಗೆ ರವಿ ಬೆಳಗೆರೆಗೆ ಮಾಹಿತಿ ದೊರಕಿದ್ದು, ರೌಡಿ ಕುಳ್ಳಶಾಂತನಿಗೆ ಸುಪಾರಿ ಕೊಟ್ಟು ರವಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.ಆದ್ರೆ ಆ ರೌಡಿಯನ್ನ ಗೆಳೆಯರೇ ರವಿಬೆಳೆಗೆರೆ ಮುಂದೆ ಕರೆತಂದಿದ್ರಂತೆ. ಈ ವೇಳೆ ಅವರು ರವಿ ಬೆಳಗೆರೆಯನ್ನು ಕಂಡು ಶಾಕ್ ಆಗಿದ್ರಂತೆ. ಇದೇ ಸಂದರ್ಭದಲ್ಲಿ ಸುಪಾರಿ ಕಿಲ್ಲರ್ ಹತ್ಯೆಗೆ ಡೀಲ್ ಕೊಟ್ಟಿದ್ದವರ ಮಾಹಿತಿ ನೀಡಿದ್ದನಂತೆ. ಹತ್ಯೆಗೆ ಸುಪಾರಿ ಕೊಟ್ಟ ಸ್ವಾಮೀಜಿ, ಸಂಪಾದಕರ ಹೆಸರು ಕೇಳಿ ರವಿ ಬೆಳಗೆರೆಗೆ ಶಾಕ್ ಆಗಿತ್ತಂತೆ. ಹೀಗಾಗಿ ರವಿಬೆಳಗೆರೆ ಅಂದೇ ಒಂದು ರಿವಾಲ್ವರ್ ಬೇಕೆಂದು ಡಿಸೈಡ್ ಮಾಡಿದ್ದರಂತೆ. ಈವರೆಗೆ ರವಿ ಎರಡು ಬಾರಿ ರಿವಾಲ್ವರ್ ಬಳಸಿದ್ದಾರೆ ಎಂಬ ಮಾಹಿತಿಯೊಂದು ದೊರೆತಿದೆ.Sign in to your account
Username or Email Address


Password

 Remember Me


