ಬೆಂಗಳೂರು: ನಗರದ ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಘಟನೆಯಲ್ಲಿ ಅರ್ಚಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಘಟನೆ ನೆಲಮಂಗಲ ಸಮೀಪದ ದೇವಣ್ಣನಪಾಳ್ಯದಲ್ಲಿ ನಡೆದಿದೆ. ಮೃತ ಅರ್ಚಕರನ್ನು ಗೋಪಿನಾಥ್ (46) ಎಂದು ಗುರುತಿಸಲಾಗಿದ್ದು, ಇವರು ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಚಿಕ್ಕ ಮಧುರೆ ಶನೈಶ್ವರ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.ಇವರು ಇಂದು ಬೆಳಗ್ಗೆ ನಗರದಿಂದ ಮಧುರೆಗೆ ತೆರಳುವಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅರ್ಚಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


