ಬೆಂಗಳೂರು: ಟ್ರ್ಯಾಕ್ಟರ್ ಕೆಲಸದ ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ತೋಟದ ಮಾಲೀಕ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ತೋಟದ ಮನೆಯಲ್ಲಿ ಕೂಡಿ ಹಾಕಿ ಮಾಲೀಕ ರಮ್‍ನಾಯಕ್ ಮತ್ತು ಆತನ ಚೇಲಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಗಿರೀಶ್ ಶನಿವಾರ ಬೆಂಗಳೂರಿನ ಕಗ್ಗಲಿಪುರದ ಬಾದೆಕಟ್ಟೆಯ ತೋಟದ ಮನೆಗೆ ಹೋಗಿದ್ದರು. ಆದರೆ ಶನಿವಾರ ಮತ್ತೆ ಮನೆಗೆ ವಾಪ್ಸಾಗಿರಲಿಲ್ಲ. ಜೊತೆಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ಸಂಶಯಗೊಂಡ ಕುಟುಂಬಸ್ಥರು ಬಾದೆಕಟ್ಟೆ ಗ್ರಾಮದ ತೋಟದ ಮನೆಗೆ ಹೋಗಿ ನೋಡಿದಾಗ ಗಿರೀಶ್ ಸಾವು ಬದುಕಿನ ನಡುವೆ ನರಳಾಡುತ್ತಿದ್ದರು. ಕೂಡಲೇ ಗಿರೀಶ್ ನನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಈ ಸಂಬಂಧ ಬೆಂಗಳೂರು ಹೊರವಲಯದ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಮಾಲೀಕನ ಮತ್ತವನ ಬಂಟರ ವಿರುದ್ಧ ದೂರು ಕೊಟ್ಟರು ಕೇವಲ ಸ್ಟೇಷನ್‍ಗೆ ಕರೆಸಿ ಬಿಟ್ಟು ಕಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಆರೋಪಿಗಳನ್ನು ಬಂಧಿಸುವಂತೆ ಗಿರೀಶ್ ಕಡೆಯವರು ಶನಿವಾರ ರಾತ್ರಿ ರಸ್ತೆ ತಡೆದು ಪ್ರತಿಭಟಿಸಿದ್ದರು.  Sign in to your account
Username or Email Address


Password

 Remember Me


