ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಶುಕ್ರವಾರದಂದು ಬಂಧಿತರಾದ ಪತ್ರಕರ್ತ ರವಿ ಬೆಳಗೆರೆ ಇಂದು ಬೆಳಗಿನ ಜಾವದವರೆಗೂ ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದಾರೆ.ಕಾಲು ನೋವಿನಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಕಾಲು ಒತ್ತುವವರಿಲ್ಲದೇ ತಳಮಳ ಅನುಭವಿಸಿದ್ರು. ರಾತ್ರಿ ಮನೆಯಿಂದ ಊಟ, ಔಷಧಿ ಮತ್ತು ನೈಟ್ ಡ್ರೆಸ್ ತರಿಸಿಕೊಂಡಿದ್ದರು. ಮಧ್ಯರಾತ್ರಿ ಸಿಸಿಬಿ ಕಚೇರಿಗೆ ಆಗಮಿಸಿದ ಡಿಸಿಪಿ ಜಿನೇಂದ್ರರಿಂದ ರವಿ ಬೆಳಗೆರೆ ಅವರ ವಿಚಾರಣೆ ನಡೆಯಿತು. ರಾತ್ರಿಯಿಡೀ ರವಿ ಬೆಳಗೆರೆ ಮಕ್ಕಳು ಕಚೇರಿ ಮುಂದೆಯೇ ಠಿಕಾಣಿ ಹೂಡಿದ್ದರು. ವೈದ್ಯರಿಂದ ಪ್ರತಿ ನಾಲ್ಕು ಗಂಟೆಗೆ ಒಮ್ಮೆ ರವಿ ಬೆಳಗೆರೆ ಆರೋಗ್ಯ ಪರಿಶೀಲನೆ ನಡೆಯಿತು.ರಾತ್ರಿ 11.00: ಸಿಸಿಬಿ ವಶಕ್ಕೆ ಒಪ್ಪಿಸಿದ ಜಡ್ಜ್.
ರಾತ್ರಿ 11.20: ಸಿಸಿಬಿ ಕಚೇರಿಗೆ ರವಿ ಬೆಳಗೆರೆ ಆಗಮನ.
ರಾತ್ರಿ 11.30: ಮಗ ಕರ್ಣ ಜೊತೆ ಮಾತುಕತೆ. ನೈಟ್ ಡ್ರೆಸ್, ಊಟ ತರಲು ಸೂಚನೆ.
ರಾತ್ರಿ 11.45: ಸಿಸಿಬಿ ಕಚೇರಿಯಲ್ಲಿ ಧಮ್ ಹೊಡೆದ ಬೆಳಗೆರೆ.
ರಾತ್ರಿ 11.50: ಕಾಲು ನೋವು…ನೋವು ಎಂದ ರವಿ.
ರಾತ್ರಿ 12.00: ಕಾಲು ಒತ್ರೋ…ಒತ್ರೋ ಎಂದ ರವಿ
ರಾತ್ರಿ 12.10: ನನ್ನ ಮಕ್ಕಳನಾದ್ರೂ ಕರೀರಿ ಅಂತ ಕೇಳಿದ ರವಿ
ರಾತ್ರಿ 12.15: ಮತ್ತೆ ಮತ್ತೆ ಸಿಗರೇಟು ಸೇದಿದ ಬೆಳಗೆರೆ
ರಾತ್ರಿ 12.20: ನಾನು ತಪ್ಪೇ ಮಾಡಿಲ್ಲ ಅಂತ ಪೊಲೀಸರಿಗೆ ಸಮಜಾಯಿಷಿ
ರಾತ್ರಿ 12.30: ಪೊಲೀಸರಿಂದ ಪೇಪರ್ ಪಡೆದು ಏನೇನೋ ಬರೆದ್ರು
ರಾತ್ರಿ 1.00: ಡಿಸಿಪಿ ಜಿನೇಂದ್ರ ಸಿಸಿಬಿ ಕಚೇರಿಗೆ ಆಗಮನ
ರಾತ್ರಿ 1.45: 45 ನಿಮಿಷಗಳ ಮೊದಲ ವಿಚಾರಣೆ
ಮಧ್ಯರಾತ್ರಿ 2.00: ನಿದ್ರೆಗೆ ಜಾರಿದ ರವಿ ಬೆಳಗೆರೆ. ಮಧ್ಯೆ ಮಧ್ಯೆ ಎದ್ದು ಸಿಗರೇಟು ಸೇವನೆ
ಬೆಳಗಿನ ಜಾವ 4.00 ಗಂಟೆ: ನಿದ್ರೆಯಿಂದ ಎದ್ದ ರವಿ ಬೆಳಗೆರೆ
ಬೆಳಗಿನ ಜಾವ 4.30 ಗಂಟೆ: ಏನೇನೋ ಕನವರಿಸಿದ ರವಿ ಬೆಳಗೆರೆSign in to your account
Username or Email Address


Password

 Remember Me


