ಹಾವೇರಿ: ವರ್ಷದ ಭವಿಷ್ಯವಾಣಿ ಎಂದೇ ಚಿರಪರಿಚಿತವಾಗಿರುವ ಮಾಲತೇಶ ದೇವರ (Malatesh Swamy) ಕಾರ್ಣಿಕದಲ್ಲಿ (Goravayya Karnika) ಈ ಬಾರಿ ಗೊರವಯ್ಯ ಸ್ವಾಮಿ `ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಎಂದು ದೈವವಾಣಿ ನುಡಿದಿದ್ದಾರೆ.ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ ಈ ಬಾರಿಯ ಕಾರ್ಣಿಕ ನುಡಿದಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಕಾರ್ಣಿಕ ವಾಣಿಯನ್ನು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ವಿಜಯದಶಮಿ – ಶ್ರೀಗಳಿಂದ ರಾಯರಿಗೆ ವಿಶೇಷ ಪೂಜೆಈ ವರ್ಷ ಮುಕ್ಕೋಟಿ ಜನ ಅನ್ನದಾತರು ಸಾವಿರಾರು ರೂ. ಖರ್ಚು ಮಾಡಿದರೂ ಬೆಳೆಗಳು ಬರಲಿಲ್ಲ. ಮಳೆರಾಯನ ಅವಕೃಪೆಯಿಂದ ಬರಗಾಲ ಬಂದಿದೆ. ಮಳೆ ಇಲ್ಲದೆ ಅನ್ನದಾತರು ಕೈ ಸುಟ್ಟುಕೊಂಡಿದ್ದಾರೆ. ಇನ್ನೂ ರಾಜಕೀವಾಗಿ (Politics) ಕೋಟ್ಯಂತರ ಜನರು ಮತ ಹಾಕಿ ಸರ್ಕಾರವನ್ನು ಬಹುಮತದಿಂದ ತಂದಿದ್ದಾರೆ. ಅದರೆ ಮಹಿಳೆಯ ಹಸ್ತಕ್ಷೇಪದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ. ಸರ್ಕಾರ ಏರುಪೇರು ಆಗುವ ಹಂತಕ್ಕೆ ಸಹ ತಲುಪಲಿದೆ ಎಂದು ವಿಶ್ಲೇಷಿಸಿದ್ದಾರೆ.ರಾಣೇಬೆನ್ನೂರಿನ (Ranebennur) ದೇವರಗುಡ್ಡದ (Devaragudda) ಮಾಲತೇಶ ದೇವಸ್ಥಾನ ಹಲವು ವರ್ಷಗಳ ಇತಿಹಾಸ ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕ ಕೇಳಲು ಸಾವಿರಾರು ಜನ ಸೇರುತ್ತಾರೆ. ಸುಮಾರು 9 ದಿನಗಳ ಕಾಲ ಕಠಿಣ ಉಪವಾಸ ವ್ರತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ. ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಾರೆ.ಸಂಜೆ ವೇಳೆಗೆ ಕಾರ್ಣಿಕ ಸ್ಥಳಕ್ಕೆ ಬರುವ ಗೊರವಯ್ಯ 21 ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾರೆ. ಸದ್ದಲೇ ಎಂದಾಕ್ಷಣ ಕಿಕ್ಕಿರಿದು ಸೇರಿದ ಜನರು ಮೌನಕ್ಕೆ ಜಾರುತ್ತಾರೆ. ಆಗ ಗೊರವಪ್ಪ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ – 20 ಸಾವು, ನೂರು ಮಂದಿಗೆ ಗಾಯWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


