ಹುಬ್ಬಳ್ಳಿ: 2024ಕ್ಕೆ ಭಾರತದಲ್ಲಿ ಮೋದಿ ಸರ್ಕಾರ (Narendra Modi Government) ಇರಲ್ಲ. ನಮ್ಮ ಸರ್ಕಾರ ಬಂದ ನಂತರ ಬಿಜೆಪಿ (BJP) ಲೆಕ್ಕಾಚಾರದ ಜೊತೆಗೆ ನಮ್ಮ ಲೆಕ್ಕಾಚಾರ ಸಹ ಇದೆ. ಆದರೆ ನಮ್ಮ ಲೆಕ್ಕಾಚಾರದ ಪ್ರಕಾರ 2024ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ. ಯಾರ ಲೆಕ್ಕಾಚಾರ ನಿಜ ಆಗುತ್ತದೆ ಎಂದು ನೋಡೋಣ ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಕೆಲವರು ಬರುತ್ತಿದ್ದಾರೆ. ನಮಗೇನೂ ಭಯ ಇಲ್ಲ. ಆದರೆ ಬಿಜೆಪಿ ಬಿಟ್ಟು ಯಾಕೆ ಬರುತ್ತಿದ್ದಾರೆ ಎಂದು ಅವರನ್ನೇ ಕೇಳಿ. ಲೋಕಸಭೆ ಚುನಾವಣೆಗೆ (Lok Sabha Election) ಸಿದ್ಧತೆ ನಡೆದಿದೆ. ಬಿಜೆಪಿ ಕರ್ಮಕಾಂಡ ಜನರಿಗೆ ಮುಟ್ಟಿಸುತ್ತೇವೆ. ಹೈಕಮಾಂಡ್ ಲೋಕಸಭೆ ಚುನಾವಣೆಗಾಗಿ ಸರ್ವೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನ ಟೀಂಗೆ ಸಪೋರ್ಟ್ ಮಾಡೋಕೆ ಹೋಗಿದ್ರಾ – ಸಿಎಂಗೆ ಹೆಚ್‌ಡಿಕೆ ಪ್ರಶ್ನೆಬಿಜೆಪಿ ಸರ್ಕಾರದ ಹಣ 8,500 ಕೋಟಿ. ಸಾಹುಕಾರ ಪಕ್ಷ ಯಾರದ್ದೂ ಅನ್ನೋದು ಜನರಿಗೆ ಗೊತ್ತಾಗುತ್ತದೆ. ನಾನು ಐಟಿ ರಿಪೋರ್ಟ್ ಓದಿದ್ದೇನೆ. ಎಲ್ಲೂ ಕಾಂಗ್ರೆಸ್ (Congress) ನಾಯಕರು ಅಂತಾ, ಉಲ್ಲೇಖ ಇಲ್ಲ. ಇಷ್ಟು ವರ್ಷದಿಂದ ಅವರೇ ತನಿಖೆಯನ್ನು ಜೇಬಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇಷ್ಟು ವರ್ಷದಲ್ಲಿ ಯಾರಿಗಾದರೂ ಸಜಾ ಆಗಿದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶೀಘ್ರ ಗುಣಮುಖರಾಗಿ – ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂನಮ್ಮ ಪಕ್ಷದಲ್ಲಿ ಯಾವ ಅಸಮಾಧಾನ ಇಲ್ಲ. ಬಣಗಳೂ ಇಲ್ಲ. ಜಾರಕಿಹೊಳಿ (Satish Jarkiholi) ಮತ್ತು ಡಿಕೆ ಶಿವಕುಮಾರ್ (DK Shivakumar) ಭಿನ್ನಮತದ ತರಹ ನನಗೇನೂ ಅನಿಸುತ್ತಿಲ್ಲಾ ಎಂದರು. ಇದನ್ನೂ ಓದಿ: ನನ್ನ ಮೌನವೂ ವೀಕ್ನೆಸ್ ಅಲ್ಲ: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟುWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


