ರಾಯಚೂರು: ಎಂ.ಬಿ ಪಾಟೀಲ್ (MB Patil) ಮುಖ್ಯಮಂತ್ರಿ ಆಗಬೇಕು ಅಂದ್ರೆ ಆಗಲ್ಲ ಜನ ಬಯಸಬೇಕು, ಸರ್ಕಾರ ಅಧಿಕಾರಕ್ಕೆ ಬರಬೇಕು. ಈಗ ಪಕ್ಷ ಅಧಿಕಾರಕ್ಕೆ ಬಂದಿದೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.ರಾಯಚೂರಿನ ಲಿಂಗಸುಗೂರಿನಲ್ಲಿ ಮಾತನಾಡಿದ ಅವರು, ಸಿ.ಎಂ ಆಗಬೇಕು ಅಂತ ಅಂದುಕೊಂಡ್ರೆ ಆಗುವುದಿದ್ದರೆ, ಈಗಾಗಲೇ ಸಾಕಷ್ಟು ಜನ ಸಿಎಂ ಆಗಿ ಹೋಗುತ್ತಿದ್ದರು ಎಂದರು.ಬೆಳಗಾವಿ ರಾಜಕಾರಣ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ತುಂಬಾ ತರಾತುರಿಯಲ್ಲಿ ಬೆಳಗಾವಿ ಹೋಗಿದ್ದೆ, ಯಾರಿಗೂ ಹೇಳಲು ಆಗಿಲ್ಲ ಅಂತ ಈಗಾಗಲೇ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಸತೀಶ್ ಜಾರಕಿಹೊಳಿಯವರು (Sathish Jarakiholi) ನಮ್ಮಲ್ಲಿ ಯಾವ ವ್ಯತ್ಯಾಸ ಇಲ್ಲಾ ಅಂತ ಹೇಳಿದ್ದಾರೆ. ಇದನ್ನ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.  ಇದನ್ನೂ ಓದಿ: Gaganyaan Mission: ತಾಂತ್ರಿಕ ದೋಷದಿಂದ ಸದ್ಯಕ್ಕೆ ಮೊದಲ ಪರೀಕ್ಷಾರ್ಥ ಹಾರಾಟ ಸ್ಥಗಿತಗುತ್ತಿಗೆದಾರರ ಮೇಲೆ ಐಟಿ ದಾಳಿ (IT Raid) ಹಿಂದೆಯೂ ನಡೀತಿತ್ತು, ಈಗಲೂ ನಡೆದಿದೆ. ದಾಳಿ ಆಗಿರುವುದಕ್ಕೂ ಕಾಂಗ್ರೆಸ್ ಗೂ ಏನೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಟೆಂಡರ್‍ಗಳನ್ನೇ ಕರೆದಿಲ್ಲ. ಬಿಜೆಪಿಯವರು ಆಪಾದನೆ ಮಾಡೋದಾದ್ರೆ ನಾವು ಇದು ಆ 40% ಹಣ ಈಗ ಚುನಾವಣೆ ಸಂದರ್ಭದಲ್ಲಿ ಹೊರಬರುತ್ತಿದೆ ಅಂತ ಹೇಳಬೇಕಾಗುತ್ತೆ ಅಂತ ಎಂಬಿಪಿ ಹೇಳಿದರು.ಸಚಿವ ಶರಣಪ್ರಕಾಶ ಪಾಟೀಲ್ ಹೆಸರು ಹೇಳಿ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕುರಿತು ಮಾತನಾಡಿ, ಶರಣಪ್ರಕಾಶ ಪಾಟೀಲ್ ರಾಜಕೀಯದಲ್ಲಿ ಬದ್ಧತೆ ಹಾಗೂ ಪರಿಶುದ್ಧತೆ ಹೊಂದಿದಂತಹ ನಾಯಕ. ಸಿಐಡಿ ತನಿಖೆಯೂ ಈ ಪ್ರಕರಣಕ್ಕೆ ಅಗತ್ಯವಿಲ್ಲ. ಈಶ್ವರಪ್ಪ ಅವರ ಕೇಸ್ ಬೇರೆ ಶರಣಪ್ರಕಾಶರದ್ದು ಬೇರೆ. ಅತ್ಯಂತ ದಕ್ಷವಾದ, ಪ್ರಾಮಾಣಿಕವಾದ, ಪರಿಶುದ್ಧವಾದ ನಾಯಕ ಶರಣಪ್ರಕಾಶ ಪಾಟೀಲ್. ಸುಮ್ಮನೆ ಎಲ್ಲಾ ಬೋಗಸ್ ಯಾರೋ ಬರಕೊಟ್ಟಿರೋದು ಅದು ಅಂತ ಹೇಳಿದರು.ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದೆ ಕೆ.ಎಸ್. ಈಶ್ವರಪ್ಪ ಬಂದ್ರೂ ಅಚ್ಚರಿಯಿಲ್ಲ. ಪಾರ್ಲಿಮೆಂಟ್ ಎಲೆಕ್ಷನ್ ವರೆಗೆ ನೋಡಲಿ ಈಶ್ವರಪ್ಪ ಸೇರಿಕೊಂಡರೆ ಅಚ್ವರಿಯಿಲ್ಲಾ ಆದ್ರೆ ಸೇರಿಸಿಕೊಳ್ಳಬೇಕಾದರೆ ನಾವೇ ವಿಚಾರ ಮಾಡುತ್ತೇವೆ ಅಂತ ಸಚಿವ ಎಂ.ಬಿ.ಪಾಟೀಲ್ ಹೇಳಿದರು.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


