ಬಳ್ಳಾರಿ: ಮದುವೆಯಾಗಿ (Marriage) ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ಬಳ್ಳಾರಿ (Ballari) ಪೊಲೀಸರು (Police) ದೂರ ಮಾಡಿದ್ದಾರೆ. ಯುವತಿ ಕಾಣೆಯಾಗಿದ್ದಾಳೆ ಎಂಬ ದೂರಿನಿಂದ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.ಅವರಿಬ್ಬರು ಕಾಲೇಜಿನ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆ ದಿನಗಳಿಂದಲೇ ಒಂದಾಗಿ ಬದುಕುವ ಕನಸು, ಕಾನೂನು ಪ್ರಕಾರ ಮದುವೆಗೆ ಅರ್ಹ ವಯಸ್ಸಿಗೆ ಬರುವ ತನಕ ಕಾದು ಮದುವೆ ಆಗಿದ್ದರು. ಬಳಿಕ ನೋಂದಣಿ ಸಹ ಮಾಡಿಸಿದ್ದರು. ಇನ್ನೇನೂ ನಮ್ಮ ಬದುಕು ನಿರಾಳ ಎಂದುಕೊಂಡಿದ್ದ ದಂಪತಿಯನ್ನು ಪೊಲೀಸರೇ ದೂರ ಮಾಡಿದ್ದಾರೆ. ಇದನ್ನೂ ಓದಿ: ರೈತರಿಗೆ ಪವರ್ ಶಾಕ್- ಲಕ್ಷ ಲಕ್ಷ ಬಿಲ್ ನೀಡಿರುವ ವಿದ್ಯುತ್ ಇಲಾಖೆಯುವತಿ ಕಾಣೆಯಾಗಿದ್ದಾಳೆ ಎಂಬ ದೂರಿನ ಕಾರಣಕ್ಕೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಜೋಡಿಯನ್ನು ಇದೀಗ ಬೇರೆ ಮಾಡಿದ್ದಾರೆ. ಇದಕ್ಕೆ ಕಾರಣ ಜಾತಿಯ ವಿಚಾರ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯುವತಿಯ ಪೋಷಕರು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.ಏನಿದು ಘಟನೆ..?; ಬಳ್ಳಾರಿಯ ಕಾರ್ತಿಕ್ ಎಂಬ ಯುವಕ ಸಿರುಗುಪ್ಪದ ಶಾನವಾಸಪುರದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಅಲ್ಲದೇ ಕಾನೂನಾತ್ಮಕವಾಗಿ ನೋಂದಣಿ ಸಹ ಮಾಡಿಸಿಕೊಂಡು, ನೆಮ್ಮದಿಯಾಗಿ ಜೀವನ ಮಾಡುತ್ತಿದ್ದರು. ಹೀಗಿರುವಾಗ ಏಕಾಏಕಿ ಹುಡುಗಿ ಕಾಣೆಯಾಗಿದ್ದಾಳೆ ಎಂಬ ದೂರೊಂದು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದಾಖಲಾಗುತ್ತದೆ. ಬಳಿಕ ಹರಪನಹಳ್ಳಿ ಬಳಿಯ ಹಳ್ಳಿಯೊಂದರಲ್ಲಿದ್ದ ಈ ಜೋಡಿಯನ್ನು ಪೊಲೀಸರು ಪತ್ತೆಮಾಡಿ ಬಳ್ಳಾರಿಗೆ ಕರೆದುಕೊಂಡು ಬಂದಿದ್ದಾರೆ.ಈ ವೇಳೆ ದಂಪತಿ ಬಳ್ಳಾರಿಗೆ ಬಂದರೆ ತಮ್ಮನ್ನು ಯುವತಿಯ ಮನೆಯವರು ಬೇರೆ ಮಾಡುತ್ತಾರೆ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಹರಪನಹಳ್ಳಿ ಠಾಣೆಯಲ್ಲೇ ಮಾಹಿತಿ ಪಡೆಯುವಂತೆ ತಿಳಿಸಿದ್ದಾರೆ. ಸೂಕ್ತ ಭದ್ರತೆ ಕೊಡುವ ಭರವಸೆ ನೀಡಿ ಕರೆದುಕೊಂಡು ಬಂದ ಪೊಲೀಸರು ಯುವತಿಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳಿಸಿದ್ದಾರೆ.ಯುವಕ ಕಾರ್ತಿಕ್‍ಗೆ ಜೀವ ಬೆದರಿಕೆ ಇದೆ. ನಾವು ಇದನ್ನೂ ಬಿಟ್ಟು ಏನು ಮಾಡಲು ಆಗುವುದಿಲ್ಲ. ಹಾಗಾಗಿ ನೀನು ಸ್ವಲ್ಪ ದಿನಗಳ ಕಾಲ ಸುಮ್ಮನಿರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಯುವಕ ಒಪ್ಪಿ ಪೊಲೀಸರ ಸಹಕಾರಕ್ಕೆ ಕಾಯುತ್ತಾನೆ. ಇನ್ನೆನೋ ಪೊಲೀಸರು ತಮ್ಮಿಬ್ಬರನ್ನು ಒಂದು ಮಾಡುತ್ತಾರೆ ಎಂದು ನಂಬಿದ್ದ ಜೋಡಿಯ ಭರವಸೆ ಈಗ ಸುಳ್ಳಾಗಿದೆ.ಕೊನೆಗೆ ಕಾರ್ತಿಕ್ ಸಮಾಜದ ಮುಖಂಡರನ್ನು ಸಂಪರ್ಕ ಮಾಡಿದ್ದಾನೆ. ಆಗ ಎಚ್ಚೆತ್ತುಕೊಂಡ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು ಕಾರ್ತಿಕ್‍ನನ್ನು ಕರೆದು ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಎಂದು ದಿನ ಪೂರ್ತಿ ಕಾಯಿಸಿದ್ದಾರೆ. ಕೊನೆಗೆ ಒಂದು ಪತ್ರ ಕೊಟ್ಟು ಕೌಲ್ ಬಜಾರ್ ಪೊಲೀಸ್ ಠಾಣೆಗೆ ಹೋಗಿ, ಸಂಜೆ 6 ಗಂಟೆ ವೇಳೆಗೆ ನಿಮ್ಮ ಪತ್ನಿ ನಿಮ್ಮ ಜೊತೆ ಬರುತ್ತಾರೆ ಎಂದಿದ್ದಾರೆ. ಇದರ ನಡುವೆ ಯುವತಿ ತನ್ನ ತವರು ಮನೆ ಸೇರಿದ್ದಾಳೆ.ಸಾಂತ್ವನ ಕೇಂದ್ರದಲ್ಲಿದ್ದ ಕಾರ್ತಿಕ್ ಪತ್ನಿ ಹೋಗಿದ್ದು ಹೇಗೆ ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರ ಇಲ್ಲ. ಪತ್ನಿಯನ್ನು ಭೇಟಿಯಾಗಲು ಅವಕಾಶ ಮಾಡಿಕೊಡಿ ಎಂಬ ಯುವಕನ ಪ್ರಶ್ನೆಗೆ ಪೊಲೀಸರು ನೋಡೋಣ ಎಂಬ ಉತ್ತರ ಕೊಟ್ಟು ಕಳಿಸಿದ್ದಾರೆ. ಕಾನೂನಾತ್ಮಕವಾಗಿ ಮದುವೆಯಾಗಿದ್ದ ಜೋಡಿಯನ್ನು ವಿಚ್ಛೇದನವಿಲ್ಲದೆ ದೂರಮಾಡಿದ್ದು ಹೇಗೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.  ಇದನ್ನೂ ಓದಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಡವಟ್ಟು- ಕೆಇಎಯಿಂದ ನೂರಾರು ಅಭ್ಯರ್ಥಿಗಳಿಗೆ ಸಂಕಷ್ಟWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


