ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನದ ವಿರುದ್ಧ 62 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕ ಜೋಡಿಯಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ (David Warner And Mitchell Marsh) ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ (Haris Rauf) ಒಂದೇ ಓವರ್‌ನಲ್ಲಿ 24 ರನ್ ಚಚ್ಚಿಸಿಕೊಂಡು ಬೇಡದ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿದ್ದಾರೆ.ಶುಕ್ರವಾರ (ಅ.20) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ವಾರ್ನರ್- ಮಾರ್ಷ್ ಜೋಡಿಯು ಆರಂಭದಿಂದಲೂ ಸ್ಫೋಟಕ ಆಟಕ್ಕೆ ಮುಂದಾಗಿತ್ತು. ಈ ವೇಳೆ 9ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ್ದ ಹ್ಯಾರಿಸ್‌ ರೌಫ್‌ 4, 6, 1, 1w, 4, 4, 4 (24 ರನ್‌) ಚಚ್ಚಿಸಿಕೊಂಡು ಆ ಮೂಲಕ ರೌಫ್ ಪಾಕ್ ಪರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ದುಬಾರಿ 3ನೇ ಬೌಲರ್ ಎಂಬ ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡರು.2011ರಲ್ಲಿ ಭಾರತದ ಜಂಟಿ ಆತಿಥ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಪಾಕ್ ವೇಗಿ ಶೋಯೆಬ್ ಅಖ್ತರ್ ಒಂದೇ ಓವರ್ ನಲ್ಲಿ 30 ರನ್ ನೀಡಿ ಪಾಕ್‌ನ ದುಬಾರಿ ಬೌಲರ್ ಎಂಬ ಅನಗತ್ಯ ದಾಖಲೆ ನಿರ್ಮಿಸಿದ್ದರು. ಅದೇ ಪಂದ್ಯದಲ್ಲಿ ಅಬ್ದುಲ್ ರಜಾಕ್ ಓವರ್ ನಲ್ಲಿ 28 ರನ್ ಕೊಟ್ಟಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್ ರೌಫ್ 24 ರನ್ ನೀಡಿ ಪಾಕ್‌ನ 3ನೇ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.2023ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಓವರ್ ನಲ್ಲೇ (9ನೇ ಓವರ್‌ನಲ್ಲಿ) ಹ್ಯಾರಿಸ್ ರೌಫ್ ದುಬಾರಿ ಆದರು. ತಮ್ಮ ಓವರ್ ನ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಬೌಂಡರಿ ಬಾರಿಸಿದರೆ, 2ನೇ ಎಸೆತದಲ್ಲಿ ಫೈನ್ ಲೆಗ್ ನ ಕಡೆ 98 ಮೀಟರ್ ಸಿಕ್ಸರ್ ಸಿಡಿಸಿದರು. ಮರು ಎಸೆತದಲ್ಲೇ ಸಿಂಗಲ್ಸ್ ಕದ್ದರು. ಬಳಿಕ ಸ್ಟ್ರೈಕ್‌ಗೆ ಬಂದ ಮಿಚೆಲ್‌ ಮಾರ್ಷ್‌ಗೆ ಮೊದಲ ಎಸೆತವನ್ನು ವೈಡ್ ಎಸೆದರು. ನಂತರದ 3 ಎಸೆತಗಳಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ ಮಿಚೆಲ್ ಮಾರ್ಷ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ಒಟ್ಟಾರೆ ಹ್ಯಾರಿಸ್ ರೌಫ್ 24 ರನ್ ಚಚ್ಚಿಸಿಕೊಂಡರು.3 ವಿಕೆಟ್ ಕಬಳಿಸಿದ ಹ್ಯಾರಿಸ್ ರೌಫ್: ಪಂದ್ಯದ ಮೊದಲ 5 ಓವರ್ ಗಳಲ್ಲಿ 50ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರೂ ನಂತರದ ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಹ್ಯಾರಿಸ್ ರೌಫ್ ತಮ್ಮ 8 ಓವರ್ ಗಳಲ್ಲಿ 83 ರನ್ ಕೊಟ್ಟು ಪ್ರಮುಖ 3 ವಿಕೆಟ್ ಪಡೆದರು.‌2023ರ ವಿಶ್ವಕಪ್ ಟೂರ್ನಿಯಲ್ಲಿ ದುಬಾರಿ ಬೌಲಿಂಗ್
* ಮತೀಶ ಪತಿರಣ – ಶ್ರೀಲಂಕಾ – 26 ರನ್- ದಕ್ಷಿಣ ಆಫ್ರಿಕಾ ವಿರುದ್ಧ
* ಹ್ಯಾರಿಸ್ ರೌಫ್ – ಪಾಕಿಸ್ತಾನ – 24 ರನ್- ಆಸ್ಟ್ರೇಲಿಯಾ ವಿರುದ್ಧ
* ಕಸುನ್ ರಂಜಿತ – ಶ್ರೀಲಂಕಾ – 23 ರನ್- ದಕ್ಷಿಣ ಆಫ್ರಿಕಾ ವಿರುದ್ಧ
* ಜೆರಾಲ್ಡ್ ಕೋಟ್ಜಿ- ದಕ್ಷಿಣ ಆಫ್ರಿಕಾ – 23 ರನ್- ಶ್ರೀಲಂಕಾ ವಿರುದ್ದ
* ಹಸನ್ ಮಹ್ಮೂದ್ – ಬಾಂಗ್ಲಾದೇಶ – 23 ರನ್- ಟೀಮ್ ಇಂಡಿಯಾ ವಿರುದ್ಧWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


