ಬೆಂಗಳೂರು: ವಿಧಾನಸೌಧ (Vidhanasoudha), ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಆಯುಧಪೂಜೆ (Ayudha Pooja) ವೇಳೆ ರಾಸಾಯನಿಕಯುಕ್ತ ಅರಿಶಿಣ, ಕುಂಕುಮ ಬಳಸದಂತೆ ಹೊರಡಿಸಿದ ಆದೇಶ ರಾಜಕೀಯ ಸ್ವರೂಪ ಪಡೆದುಕೊಂಡಿದೆ.ವಿಪಕ್ಷಗಳು ಇಂದು ಕೂಡ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈ ಸರ್ಕಾರದಿಂದ ನಾಡಿಗೆ ಯಾವುದೇ ಒಳಿತು ಸಾಧ್ಯವಿಲ್ಲ ಎಂಬುದು ಇವರ ನಿರ್ಧಾರಗಳು ಸಾಬೀತು ಮಾಡ್ತಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಹಿಂದೂಗಳ ಹಬ್ಬಗಳಿಗೆ ಕಂಡೀಷನ್ ಹಾಕೋ ಈ ಸರ್ಕಾರವನ್ನು ನಾವೇಕೆ ಬೀಳಿಸಬಾರದು ಎಂದು ಮಾಜಿ ಮಂತ್ರಿ ಈಶ್ವರಪ್ಪ (KS Eshwarappa) ಪ್ರಶ್ನಿಸಿದ್ದಾರೆ.ಇದು ತುಷ್ಟೀಕರಣದ ಒಂದು ಭಾಗ ಎಂದು ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಕಿಡಿಕಾರಿದ್ದಾರೆ. ವಿಪಕ್ಷಗಳ ಈ ರಾಜಕೀಯಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ. ಆಯುಧಪೂಜೆ ವೇಳೆ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ,ಕುಂಕುಮ ಬಳಸಬಾರದು ಎಂಬ ಆದೇಶ ಇದೇ ಮೊದಲಲ್ಲ.. ಪಾರಂಪರಿಕಾ ಕಟ್ಟಡಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಹಿಂದಿನ ಸರ್ಕಾರಗಳು ಪಾಲಿಸಿಕೊಂಡ ಸಂಪ್ರದಾಯವನ್ನೇ ನಾವು ಪಾಲಿಸ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿ. 4ರಿಂದ 15ರ ವರೆಗೆ ಚಳಿಗಾಲದ ಅಧಿವೇಶನಅಲ್ಲದೇ 2021 ಮತ್ತು 2022ರಲ್ಲಿ ಬೊಮ್ಮಾಯಿ (Basavaraj Bommai) ಸರ್ಕಾರ ಹೊರಡಿಸಿದ್ದ ಆದೇಶ ಪ್ರತಿಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡು ವಿಪಕ್ಷಗಳಿಗೆ ಟಕ್ಕರ್ ನೀಡಿದ್ದಾರೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


