ಬಿಗ್ ಬಾಸ್ ಮನೆ (Bigg Boss Kannada 10) ಇದೀಗ 2ನೇ ವಾರಕ್ಕೆ ಧಗ ಧಗ ಅಂತಾ ಉರಿಯುತ್ತಿದೆ. ಶುರುವಿನಲ್ಲಿ ತಣ್ಣಗೆ ಇದ್ದ ಮನೆ ರಣರಂಗವಾಗಿದೆ. ವಿನಯ್ & ಟೀಂ ಮುಂದೆ ಸೋತ ಸಂಗೀತಾ (Sangeetha Sringeri) ಗಳಗಳನೇ ಅತ್ತಿದ್ದಾರೆ. ಮನೆಯಲ್ಲಿ ನಾನು ಟಾರ್ಗೆಟ್ ಆಗುತಿದ್ದೇನೆ ಎಂದು ಭಾವುಕರಾಗಿದ್ದಾರೆ.ಈ ವಾರದ ಟಾಸ್ಕ್‌ಗಳಿಗೆ ತಲಾ 8 ಸದಸ್ಯರಿರುವ ಎರಡು ತಂಡಗಳ ಅಗತ್ಯವಿತ್ತು. ಅದಕ್ಕೂ ಮುನ್ನ, ಎಲ್ಲರೂ ಈ ತಂಡಗಳಿಗೆ ನಾಯಕರನ್ನು ಒಮ್ಮತದಿಂದ ಆರಿಸಬೇಕಿತ್ತು. ಎಲ್ಲರೂ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ (Karthik Mahesh) ಹೆಸರುಗಳನ್ನ ಕ್ಯಾಪ್ಟನ್ ಆಗಲು ಹೇಳಿದರು. ಬಳಿಕ ಬಿಗ್ ಬಾಸ್ ಕೊಟ್ಟ ಟಾಸ್ಕ್‌ವೊಂದರಲ್ಲಿ ಕಾರ್ತಿಕ್ ತಂಡದಿಂದ ನೀತು, ಸಂಗೀತಾಗೆ ಎದುರಾಳಿಗಳಾಗಿ ಮೈಕಲ್ ಮತ್ತು ರಕ್ಷಕ್ ಆಟವಾಡಿದ್ದರು. ಇವರ ಮುಂದೆ ಗೆಲ್ಲೋದ್ರಲ್ಲಿ ಸಂಗೀತಾ-ನೀತು ಎಡವಿದ್ದರು. ಬಿಗ್ ಬಾಸ್ ಅಣತಿಯಂತೆ ಸಂಗೀತಾ ಅವರನ್ನ ಹೆಸರನ್ನ ಶಿಕ್ಷೆಗೆ ಅರ್ಹ ಅಂತ ವಿನಯ್ & ಟೀಂ ಒಮ್ಮತ ನಿರ್ಧಾರದಿಂದ ಹೇಳಿದ್ದರು.ಮೊದಲ ಟಾಸ್ಕ್‌ನಲ್ಲಿ ಕಾರ್ತಿಕ್ ಮಹೇಶ್ ನೇತೃತ್ವದ ಮಾಣಿಕ್ಯ ತಂಡ ಸೋಲು ಅನುಭವಿಸಿತು. ಪರಿಣಾಮ, ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ಶಿಕ್ಷೆಯಾಗಿ ಸಂಗೀತಾ ಶೃಂಗೇರಿ ಸಗಣಿ ಸ್ನಾನ ಮಾಡಬೇಕಿತ್ತು. ತಪ್ಪು ಮಾಡದೇ ಇದ್ದರೂ, ಶಿಕ್ಷೆ ಪಡೆದ ಕಾರಣಕ್ಕೆ ಸಂಗೀತಾ ಶೃಂಗೇರಿ ಬೇಸರಗೊಂಡರು. ಇದು ಅನ್‌ಫೇರ್. ಇಲ್ಲಿರೋಕೆ ನನಗೆ ಇಷ್ಟವಾಗುತ್ತಿಲ್ಲ ಎಂದು ತಮ್ಮಲ್ಲಿನ ಅಸಮಾಧಾನವನ್ನ ಸಂಗೀತಾ ಶೃಂಗೇರಿ ಹೊರಹಾಕಿದರು. ಇದನ್ನೂ ಓದಿ:ಫೋನ್ ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿವಿನಯ್ (Vinay Gowda) ತಂಡದ ನಡೆಗೆ ಸಂಗೀತಾ ಕಣ್ಣೀರಿಟ್ಟರು. ನನ್ನನ್ನು ಪದೇ ಪದೇ ಟಾರ್ಗೆಟ್ ಮಾಡ್ತಿದ್ದಾರೆ ಅದ್ಯಾಕೆ ಅಂತಾ ಭಾವುಕರಾದರು. ಸಂಗೀತಾ ಅಳುವಾಗ ಕಾರ್ತಿಕ್ ಸಮಾಧಾನ ಮಾಡಿದರು. ಬಳಿಕ ಬಿಗ್ ಬಾಸ್ ಆದೇಶದಂತೆ ಸಂಗೀತಾ ಸಗಣಿ ನೀರನ್ನ ಮನೆಮಂದಿ ಎರಚಿದರು. ಸಂಗೀತಾಗೆ ಸಗಣಿ ಹಾಕುವಾಗ ಕಾರ್ತಿಕ್ ಕೂಡ ಭಾವುಕರಾದರು.ಬೇಸರದಲ್ಲಿದ್ದ ಸಂಗೀತಾಗೆ ಕಾರ್ತಿಕ್ ಕಾಲೆಳೆದಿದ್ದಾರೆ. ಸಗಣಿ ಹಾಕಿದಾಗಲೂ ಚೆನ್ನಾಗಿ ಕಾಣಿಸುತ್ತಿದ್ರಿ? ಅದು ಹೇಗೆ ಅಂತಾ ಕಾರ್ತಿಕ್ ಹೊಗಳಿದ್ದಾರೆ. ಸಂಗೀತಾ ಅವರನ್ನು ತಬ್ಬಿ ಸಮಾಧಾನ ಮಾಡಿದ್ದಾರೆ. ಈ ಮೂಲಕ ನೋವಿನಲ್ಲಿದ್ದ ಸಂಗೀತಾಗೆ ಕಾರ್ತಿಕ್ ಜೊತೆಯಾಗಿದ್ದಾರೆ. ಇಬ್ಬರ ಸ್ನೇಹ ಸಲುಗೆ ಅಭಿಮಾನಿಗಳು ಮೋಡಿ ಮಾಡ್ತಿದೆ. ಇವರಿಬ್ಬರು ಮುಂದಿನ ದಿನಗಳಲ್ಲಿ ಜೋಡಿ ಹಕ್ಕಿ ಆಗೋದ್ರಲ್ಲಿ ಡೌಂಟೆಯಿಲ್ಲ ಅಂತಿದ್ದಾರೆ ಫ್ಯಾನ್ಸ್. 





















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


