ಬೆಂಗಳೂರು: ಇಲ್ಲಿನ ಎನ್‌ಶ್ಯೂರ್ ರಿಲಯೇಬಲ್ ಪವರ್ ಸೊಲ್ಯೂಶನ್ ಲಿಮಿಟೆಡ್ (NSure) ಭಾರತದಲ್ಲಿ ಲಿಥಿಯಂ-ಅಯಾನ್ ಸೆಲ್ ತಯಾರಕರ ಸಾಲಿಗೆ ಸೇರಲಿದ್ದು, ಬೆಂಗಳೂರಿನ ಸಮೀಪದ ಮಾಲೂರು ಘಟಕದಲ್ಲಿ ಶೀಘ್ರದಲ್ಲೇ ಪ್ರಾಯೋಗಿಕ ಉತ್ಪಾದನೆ ಪ್ರಾರಂಭಿಸಲಿದೆ.ಎನ್‌ಶ್ಯೂರ್‌ನ ಸ್ಥಾಪಕ ಮತ್ತು ಸಿಇಒ, ಚಂದ್ರಕಾಂತ್ ರಾಮಲಿಂಗಂ (Chandrakanth Ramalingam) ಅವರು ಈ ಸಂಬಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟಕಕ್ಕಾಗಿ 1,050 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, 80 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸುತ್ತಿದ್ದಾರೆ. ಬೆಂಗಳೂರಿನ (Bengaluru) ಹೊರವಲಯದಲ್ಲಿರುವ, ಇವಿ ಹಬ್ ಆಗಲಿರುವ ಮಾಲೂರಿನಲ್ಲಿ ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ: ಗೆಹ್ಲೋಟ್‌ಈ ಘಟಕವು ಎಲ್‌ಇಪಿ ಸೆಲ್‌ಗಳ 1.0 GWh ಸಾಮರ್ಥ್ಯ ಹೊಂದಿದೆ. ಮುಂದಿನ ಹಂತದಲ್ಲಿ ಈ ಗಿಗಾಫ್ಯಾಕ್ಟರಿಯನ್ನು 5 GWh ಅಥವಾ ಇದಕ್ಕೂ ಹೆಚ್ಚು ಸಾಮರ್ಥ್ಯಕ್ಕೆ ವಿಸ್ತರಿಸುವ ಅವಕಾಶವೂ ಇದೆ ಎಂದು ಹೇಳಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪರಿಸರವಾದಿಗಳು ಉತ್ತೇಜನ ನೀಡುತ್ತಿದ್ದರೂ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಶಕ್ತಿ, ದೀರ್ಘಾವಧಿಯ ಬಾಳಿಕೆ ಹಾಗೂ ಸುರಕ್ಷತೆ ಕುರಿತು ಜನಸಾಮಾನ್ಯರಲ್ಲಿ ಇನ್ನೂ ಅನುಮಾನ ಇದೆ. ಇದಕ್ಕೆ ಪರಿಹಾರವಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಹಾಗೂ ಸುರಕ್ಷಿತವಾದ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಎನ್‌ಶ್ಯೂರ್ ಪರಿಚಯಿಸಲು ಮುಂದಾಗಿದೆ. ಈ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವಾರು ರೀತಿಯಲ್ಲಿ ಬಳಸಬಹುದು.ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯ ಅನುಮೋದನೆ ಪಡೆದಿರುವ ಕಂಪನಿಗಳಲ್ಲಿ ಎನ್‌ಶ್ಯೂರ್ ಮುಂಚೂಣಿ ಸ್ಥಾನ ಪಡೆದಿದೆ. ಎನ್‌ಶ್ಯೂರ್‌ನ ಪೂರ್ಣ ಪ್ರಮಾಣದ ಲಿ-ಅಯಾನ್ ಸೆಲ್ ಉತ್ಪಾದನಾ ಪ್ರಾಯೋಗಿಕ ಘಟಕವು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಕಾರ್ಯಾರಂಭಿಸಲು ಯೋಜಿಸಲಾಗಿದೆ ಎಂದು ಚಂದ್ರಕಾಂತ್ ರಾಮಲಿಂಗಂ ತಿಳಿಸಿದ್ದಾರೆ. ಇದನ್ನೂ ಓದಿ: ಕೇಸರಿ ಧ್ವಜದೊಂದಿಗೆ ಕುಂಕುಮ, ವಿಭೂತಿ ಹಚ್ಚಿ ವ್ಯಾಪಾರ ಮಾಡಿ: ವ್ಯಾಪಾರಿಗಳಿಗೆ ಪ್ರಮೋದ್ ಮುತಾಲಿಕ್ ಸಲಹೆಎನ್‌ಶ್ಯೂರ್ ದೇಶೀಯವಾಗಿ ಅಥವಾ ಸ್ಥಳೀಯವಾಗಿ ಉತ್ಪಾದಿಸಲು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದಿರುವ ಚಂದ್ರಕಾಂತ್ ರಾಮಲಿಂಗಂ, ಪ್ರಧಾನಿಯವರ ಆತ್ಮನಿರ್ಭರ ಭಾರತದ ಆಶಯಕ್ಕೆ ಪೂರಕವಾಗಿ, ಎನ್‌ಶ್ಯೂರ್ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿಯ International Advanced Research Centre for Powder Metallurgy and New Materials (ARCI) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸ್ವದೇಶಿತನವನ್ನು ಬೆಂಬಲಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ತರಬೇತಿಗಾಗಿ ಈ ಒಪ್ಪಂದ ನಡೆದಿದೆ ಎಂದು ತಿಳಿಸಿದ್ದಾರೆ.ಹೆಚ್ಚಿನ ಉಷ್ಣ ಸ್ಥಿರತೆಗೆ ಎಲ್‌ಇಪಿ (LEP) ಕೆಮಿಸ್ಟ್ರಿ ಆಯ್ಕೆ:
ಆಸಕ್ತಿಯ ವಿಷಯವೆಂದರೆ, ಎನ್‌ಶ್ಯೂರ್ ಕಂಪನಿಯು ಎನ್‌ಎಂಸಿ ಮತ್ತಿತರ ಕೆಮಿಸ್ಟ್ರಿಗಳ ಬದಲು, ಎಲ್‌ಇಪಿ ಕೆಮಿಸ್ಟ್ರಿಯನ್ನು ತನ್ನ ತಂತ್ರಜ್ಞಾನಕ್ಕಾಗಿ ಆಯ್ಕೆ ಮಾಡಿಕೊಂಡಿದೆ. ಇದು ಹೆಚ್ಚು ಉಷ್ಣ ಸ್ಥಿರತೆಯನ್ನು ನೀಡುತ್ತದೆ. ಜೊತೆಗೆ ಹೆಚ್ಚು ಸುರಕ್ಷತೆ, ದೀರ್ಘ ಬಾಳಿಕೆ, ಕೈಗೆಟುಕುವ ದರ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿದೆ. ಇದನ್ನೂ ಓದಿ: 2040ಕ್ಕೆ ಚಂದ್ರನ ಅಂಗಳಕ್ಕೆ ಭಾರತೀಯನಮ್ಮ ಉತ್ಪನ್ನದ ಸೆಲ್‌ಗಳು ನಿಕಲ್ ಅಥವಾ ಕೋಬಾಲ್ಟ್‌ನಂತಹ ಅಪರೂಪದ ಲೋಹಗಳನ್ನು ಹೊಂದಿಲ್ಲ. ಇದು ಅಗ್ನಿ ಅವಘಡದ ಅನಾಹುತದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಪರಿಸರದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ. ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ವಿವಿಧ ರೀತಿಯ ಬಳಕೆಗೆ ಆಗುವಂತೆ ಲಿ-ಅಯಾನ್ ಸೆಲ್‌ಗಳನ್ನು ತಯಾರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡಿದ್ದೇವೆ ಎಂದು ಚಂದ್ರಕಾಂತ್ ರಾಮಲಿಂಗಂ ವಿವರಿಸಿದ್ದಾರೆ.ಎನ್‌ಶ್ಯೂರ್ (NSure) ಬಗ್ಗೆ:
ಚಂದ್ರಕಾಂತ್ ರಾಮಲಿಂಗಂ ಅವರ ದೂರದೃಷ್ಟಿಯ ಫಲವಾದ ಎನ್‌ಶ್ಯೂರ್, ಉದ್ಯಮದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಆದ್ಯತೆ ನೀಡಿದೆ. ಬ್ಯಾಟರಿಯ ಶಕ್ತಿಯನ್ನು ಸಂಗ್ರಹಿಸಲು ಪರಿಹಾರ ಕಲ್ಪಿಸುವ ಮೂಲಕ ನವೀಕರಿಸಬಹುದಾದ ಇಂಧನ ಹಾಗೂ ಇ-ಸಂಚಾರ ವ್ಯವಸ್ಥೆಗೆ ಶಕ್ತಿಯ ಅಗತ್ಯವನ್ನು ಪೂರೈಸುವ ಕೆಲಸವನ್ನು ಇದು ಮಾಡಲಿದೆ. ಉದ್ಯಮದಲ್ಲಿ ಮೌಲ್ಯ, ಆವಿಷ್ಕಾರ, ವಿಶ್ವಾಸಾರ್ಹತೆ ಮತ್ತು ಭರವಸೆಯನ್ನು ಎನ್‌ಶ್ಯೂರ್ ನೀಡುತ್ತದೆ. ಭಾರತದ ಪರಿಸರಕ್ಕೆ ಸೂಕ್ತವಾದ ವಿಶ್ವ ದರ್ಜೆಯ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಅಡ್ವಾನ್ಸ್ ಸೆಲ್ ಕೆಮಿಸ್ಟ್ರಿ (ACC) ಬ್ಯಾಟರಿಗಳ ತಯಾರಿಕೆಗಾಗಿ ಗಿಗಾ ಸ್ಕೇಲ್ ದೇಶೀಯ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಎನ್‌ಶ್ಯೂರ್ ಹೊಂದಿದೆ. ಇದನ್ನೂ ಓದಿ: ಬೇಕಾದಷ್ಟು ಪ್ರೀತಿ ಮಾಡಿ, ಸಲಿಂಗಿ ಮದುವೆ ಬೇಡ: ಪ್ರಮೋದ್ ಮುತಾಲಿಕ್Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


