ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕುಟುಂಬ ಸಮೇತರಾಗಿ ಇಂದು ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕ್ಷೇತ್ರ ನಂಜುಂಡೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.ಅನಿತಾ ಕುಮಾರಸ್ವಾಮಿ (Anita Kumaraswamy), ನಿಖಿಲ್ ಕುಮಾರಸ್ವಾಮಿ (Nikhil Kumaraswamy), ರೇವತಿ ಅವರು ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೆಚ್‍ಡಿಕೆಯವರು ದೇವೇಗೌಡರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.ನಂಜುಡೇಶ್ವರನ ಸನ್ನಿಧಿಯಲ್ಲಿ ಅನಿತಾ ಕುಮಾರಸ್ವಾಮಿಯವರು ತಕ್ಕಡಿಯಲ್ಲಿ ಕೂತು ಬೆಲ್ಲದ ತುಲಾ ಭಾರ ನಡೆಸಿದ್ದಾರೆ. ಇದಕ್ಕೂ ಮುನ್ನ ಕುಟುಂಬ ತುಲಾ ಭಾರಕ್ಕೆ ಪೂಜೆ ಸಲ್ಲಿಸಿದೆ. ಪತ್ನಿ ಬಳಿಕ ಕುಮಾರಸ್ವಾಮಿ, ನಿಖಿಲ್ ಪುತ್ರ ಅವ್ಯಾನ್ ಕೂಡ ತುಲಾಭಾರ ನಡೆಸಿದ್ದಾರೆ. ನಂಜನಗೂಡಿನ ಬಳಿಕ ಮೈಸೂರಿನ ಚಾಮುಂಡಿಬೆಟ್ಟಕ್ಕೂ ಕುಟುಂಬ ತೆರಳಿದೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‍ಡಿಕೆ, ನನ್ನ ಆರೋಗ್ಯ ಸಮಸ್ಯೆಯಿಂದ ಭಗವಂತ ಪಾರು ಮಾಡಿದ್ದಾರೆ. ನಾನು ಆರೋಗ್ಯ ಸಮಸ್ಯೆಗೆ ಒಳಗಾದಾಗ ನನ್ನ ಕುಟುಂಬ ಸದಸ್ಯ ನರಸಿಂಹಸ್ವಾಮಿ ನಂಜುಂಡೇಶ್ವರನಿಗೆ ಅರಸಿಕೊಂಡಿದ್ರು. ಹೀಗಾಗಿ ಇಂದು ನಂಜುಂಡೇಶ್ವರನಿಗೆ ತುಲಾಭಾರ ಮಾಡಿಸಿದ್ದೇವೆ. ನಾಡಿಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: 26ನೇ ವರ್ಷಕ್ಕೆ ಬದುಕು ಮುಗಿಸಿದ ಮಾಜಿ ವಿಶ್ವಸುಂದರಿ ಸ್ಪರ್ಧಿ!ಬೆಂಗಳೂರಿನಲ್ಲಿ ಐಟಿ ರೇಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಐಟಿ ರೇಡ್‍ನಲ್ಲಿ ಸಿಕ್ಕಿರೋ ಹಣ ಕರ್ನಾಟಕದ ಜನತೆಯದ್ದು. ಹಣದ ಲೂಟಿಯ ಬಗ್ಗೆ ಮೈಸೂರಿನ ಸಿದ್ದಪುರುಷರು ರಾಜ್ಯದ ಸಿಎಂ ಸತ್ಯ ಹೊರಗೆ ಇಡಲಿ. ಅವರು ಒಬ್ಬರೇ ಸಿದ್ದಪುರುಷರು, ಸತ್ಯಹರಿಶ್ಚಂದ್ರರೂ ಅಂತಾರೆ ಸತ್ಯ ಹೊರಗೆ ಇಡಲಿ. ದೇವರ ಸನ್ನಿಧಿಯಲ್ಲಿ ಹೇಳ್ತಾ ಇದ್ದೀನಿ. ಇದರಲ್ಲಿ ಯಾರ ಪಾತ್ರ ಇದೆ. ನಾಡಿನ ಜನರ ದುಡ್ಡು ಅಧಿಕಾರಿಗಳಿಂದ, ಕಂಟ್ರಾಕ್ಟರ್‍ರಿಂದ ವಸೂಲಿ ಮಾಡಿರೋದು ಎಂದು ಸತ್ಯ ಹೊರ ಬರಬೇಕು. ಪ್ರತಿಯೊಂದಕ್ಕೂ ತನಿಖೆ ತನಿಖೆ ಅಂತಾರಲ್ಲಾ, ಇದು ಒಂದು ತನಿಖೆ ಮಾಡಿದ್ರೆ ಒಳ್ಳೆಯದು. ನಾನು ಐಟಿ (IT Rais) ಪ್ರತಿನಿಧಿ ಅಲ್ಲ. ರಾಜ್ಯದ ಆರೂವರೆ ಕೋಟಿ ಲೂಟಿ ಆಗುವಾಗ ಪ್ರಶ್ನೆ ಮಾಡಲು ನಾಡಿನ ಜನ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಾನು ನಾಡಿನ ಜನತೆಯ ಪ್ರತಿನಿಧಿ ಎಂದರು.ಕಸದ ವಿಚಾರದಲ್ಲಿ ಈ ಸರ್ಕಾರದ ತೀರ್ಮಾನ ಅವೈಜ್ಞಾನಿಕವಾಗಿ ಇದೆ. ಮೊದಲು ಡಿ.ಕೆ ಶಿವಕುಮಾರ್ (DK Shivakumar) ರಾಮನಗರ ಜಿಲ್ಲೆಯ ಪ್ರತಿನಿಧಿ. ಆ ಮೇಲೆ ನೀವು ನಾಡಿನ ಪ್ರತಿನಿಧಿ. ರಾಮನಗರದಲ್ಲಿ ರೈತರು ಒಳ್ಳೆಯ ಬೆಳೆ ಬೆಳೆಯುತ್ತಾರೆ. ಬೆಂಗಳೂರಿನ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು. ಇದರ ಬಗ್ಗೆ ಗಮನ ಕೊಡಬೇಕು. ಅದರ ಬದಲು ಡಿಸಿಗೆ 100 ಎಕರೆ ಜಮೀನು ಗುರುತಿಸಲು ಹೇಳಿದ್ದಾರೆ. ಹಿಂದೆ ಸರ್ಕಾರಗಳು ಮಂಡೂರಿನಲ್ಲಿ ಮಾಡಿದ್ದು ಏನಾಯ್ತು. ಯಶವಂತಪುರದಲ್ಲಿ ಯೂನಿಟ್ ಹಾಕೊಂಡು ಇರೋದು ಸರಿಯಾಗಿ ಇದ್ದಿದ್ರೆ ಈಗ ಏನು ಆಗ್ತಾ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


