ಬೆಳಗಾವಿ: ಚಿನ್ನಾಭರಣದ ಅಂಗಡಿ ಮಾಲೀಕನಿಂದ 5 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಐಟಿ ಅಧಿಕಾರಿಯೊಬ್ಬನನ್ನು (IT Officer) ರೆಡ್‍ಹ್ಯಾಂಡ್ ಆಗಿ ಪೊಲೀಸರು (Police) ವಶಕ್ಕೆ ಪಡೆದಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.ಐಟಿ ಅಧಿಕಾರಿ ಅವಿನಾಶ್ ಟೊನಪೆ ಎಂಬಾತ ಚಿಕ್ಕೋಡಿಯ (Chikkodi) ಅಂಕಲಿಯ ಪರಶುರಾಮ್ ಬಂಕಾಪುರ ಎಂಬವರ ಬಳಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪರಶುರಾಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಯೋಜನೆ ರೂಪಿಸಿದ್ದ ಪೊಲೀಸರು, ಖಾಸಗಿ ಡೆಂಟಲ್ ಕಾಲೇಜ್ ಮೈದಾನದಲ್ಲಿ ಅಧಿಕಾರಿ ಹಣ ಪಡೆಯುತ್ತಿದ್ದ ವೇಳೆ ಸಿನಿಮೀಯ ರೀತಿ ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರು ಅಧಿಕಾರಿಯನ್ನು ಬೆಳಗಾವಿಯ ಎಸಿಪಿ ಕಚೇರಿಗೆ ಕರೆದೊಯ್ದಿದ್ದಾರೆ.ನಾಲ್ಕು ದಿನಗಳ ಹಿಂದೆಯಷ್ಟೇ ಐಟಿ ಅಧಿಕಾರಿ ಅವಿನಾಶ್ ಟೋನಪಿ ನೇತೃತ್ವದ ತಂಡ ಅಂಕಲಿ ಗ್ರಾಮದಲ್ಲಿರುವ ಬಂಕಾಪುರ ಚಿನ್ನದಂಗಡಿ ಮೇಲೆ ದಾಳಿ ಮಾಡಿತ್ತು. ಪೊಲೀಸರು ಅಧಿಕಾರಿಯನ್ನು ವಶಕ್ಕೆ ಪಡೆದಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಕೊಲೆWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


