ಮೈಸೂರು: ಮಹಿಷಾ ದಸರಾ (Mahisha Dasara) ಹೆಸರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ಅಪಮಾನ ಮಾಡುತ್ತಾರೆ. ಈ ಕಾರಣಕ್ಕೆ ನಾನು ಮಹಿಷಾ ದಸರಾ ವಿರೋಧ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.ಫೇಸ್ ಬುಕ್ ಲೈವ್‌ನಲ್ಲಿ ಮಹಿಷಾ ದಸರಾ ಆಚರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಬೆಟ್ಟಕ್ಕೆ ಬಂದು ಮಹಿಷಾ ಒಳ್ಳೆಯವನು ಅಂದಷ್ಟೇ ಹೇಳಿ ಹೋಗುವುದಿಲ್ಲ. ಚಾಮುಂಡಿಗೆ ರವಿಕೆ ಹಾಕೋನು ಗಂಡಸು, ಸೀರೆ ಉಡಿಸೋನು ಗಂಡಸು ಅಂತ ಕೆಟ್ಟದಾಗಿ ಮಾತನಾಡುತ್ತಾರೆ. ನಿಮ್ಮ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾರಾದರೂ ಒಪ್ಪಿಕೊಳ್ಳುತ್ತೀರಾ? ಮಹಿಷಾನನ್ನು ಒಳ್ಳೆಯವನನ್ನಾಗಿ ಮಾಡಲು ಚಾಮುಂಡೇಶ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಂತಹವರನ್ನು ತಡೆಯಲು ನಾನು ವಿರೋಧ ಮಾಡುತ್ತಿದ್ದೇನೆ ಎಂದರು.ಚಾಮುಂಡೇಶ್ವರಿಗೆ ಹೋಗಿ ಬೇಡಿಕೊಳ್ಳುವ ಪ್ರತಿಯೊಬ್ಬರು ಮಹಿಷಾ ದಸರಾಕ್ಕೆ ವಿರೋಧ ಮಾಡಬೇಕು. ಇಲ್ಲದಿದ್ದರೆ ತಾಯಿ ಚಾಮುಂಡಿ ಮುಂದೆ ಬೇಡಿಕೊಳ್ಳಲು ನಿಮಗೆ ಯಾವ ನೈತಿಕ ಹಕ್ಕು ಇರುವುದಿಲ್ಲ. ನನ್ನ ದಲಿತ ವಿರೋಧಿ ಅಂತ ಹೇಳುತ್ತಾರೆ. ವಿಚಾರ ಇಲ್ಲದಾಗ ಈ ರೀತಿ ಉಗುಳುತ್ತಾರೆ. ಮಹಿಷಾನ ಬಗ್ಗೆ ಯಾವುದೇ ದಾಖಲೆ ಇಲ್ಲ. ಈಗ ದಲಿತ ಅಂತ ಬೋರ್ಡ್ ಹಾಕಿಕೊಂಡು ಓಡಾಡುತ್ತಿರೋರು ಯಾರು ಅಂತಾನು ಮೈಸೂರಿಗರಿಗೆ ಗೊತ್ತು ಎಂದು ಗುಡುಗಿದರು. ಇದನ್ನೂ ಓದಿ: ರಾಜ್ಯದಲ್ಲಿ ತೀವ್ರಗೊಂಡ ವಿದ್ಯುತ್ ಅಭಾವ- ಸರ್ಕಾರದಿಂದ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್ಅಶೋಕ್ ಪುರಂನ ಪ್ರತಿಯೊಬ್ಬರ ಮನೆಯಲ್ಲಿರೋದು ಚಾಮುಂಡೇಶ್ವರಿ ಪೋಟೋ. ಮಹಿಷಾನ ಪೋಟೋ ಅಲ್ಲ. ದಲಿತರೆ ಚಾಮುಂಡಿ ಹಬ್ಬವನ್ನು ಜಾಸ್ತಿ ಮಾಡೋದು. ಈಗ ರಾಜಕೀಯಕ್ಕೆ ದಲಿತ ವಿರೋಧಿ ಅನ್ನುತ್ತಾರೆ. ಮಹಿಷಾ ಯಾವಾಗ ದಲಿತನಾದ? ಮಹಿಷಾ ಬೌದ್ಧ ಬಿಕ್ಕು ಆಗಿದ್ದ ಅಂತ ಹೇಳುತ್ತಾರೆ. ತಾಯಿ ಚಾಮುಂಡಿ ಉಲ್ಲೇಖ ಬರೋದು ಕೃತ ಯುಗದಲ್ಲಿ. ಬುದ್ಧ ಬಂದಿದ್ದು ಕಲಿಯುಗದಲ್ಲಿ. ಅಶೋಕ ಇದ್ದಿದ್ದು ಕ್ರಿ.ಪೂ. 3 ನೇ ಶತಮಾನದಲ್ಲಿ. ಇವರು ಹೇಳುವ ವಿಚಾರ ಸಮಯಕ್ಕೆ ತಾಳ ಮೇಳ ಇಲ್ಲ. ಇದೆಲ್ಲ ಕಪೋಲ ಕಲ್ಪಿತ ವಿಚಾರಗಳು ಎಂದರು.ಹಿಂದೂ ಧರ್ಮ ಒಡೆಯುವ ಪ್ರಯತ್ನಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ಕೆಲವರು ನನ್ನ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಇದೆಲ್ಲ ವೈಯಕ್ತಿಕ ಲಾಭ ನಷ್ಟದಿಂದ ಆಗಿರೋದು. ನಿಜವಾದ ದಲಿತ ವಿರೋಧಿಗಳು ನೀವುಗಳು. ಲಲಿತ ನಾಯಕರಿಂದ ಉದ್ಘಾಟನೆ ಮಾಡಿಸಲು ಮುಂದಾದ್ರಿ. ಆಕೆಯ ಪುತ್ರ ಅಂಬೇಡ್ಕರ್ ಪುತ್ಥಳಿಗೆ ಮದ್ಯ ಕುಡಿಸಿದ್ದ. ನೀವು ಅಂಬೇಡ್ಕರ್ ವಾದಿಗಳು ಅಂತೀರಾ. ಆದರೆ ಅಂಬೇಡ್ಕರ್ ಪುತ್ಥಳಿಗೆ ಹೆಂಡ ಕುಡಿಸಿದ ತಾಯಿಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: Breaking: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 15 ಕಡೆ IT ದಾಳಿಸುಮ್ಮನೆ ನನ್ನ ದಲಿತ ವಿರೋಧಿ ಅಂತ ಹೇಳೋದು ಬೇಡ. ಮೈಸೂರಿಗರ ಬಳಿ ಹೋರಾಟದ ಗುಣ ಇಲ್ಲ ಅಂತ ಅಂದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿ ಮಹಿಷಾ ಪೋಟೋ ಇಟ್ಟುಕೊಳ್ಳೊಕೆ ಬಿಡ್ತಾರ? ನಿಮ್ಮ ಮನೆಯಲ್ಲೇ ಬೇಕಾದರೆ ಮಹಿಷಾ ದಸರಾ ಮಾಡಿಕೊಳ್ಳಿ. ಬೆಟ್ಟಕ್ಕೆ ಹೋಗಿ ಚಾಮುಂಡಿಗೆ ಅಪಮಾನ ಮಾಡಬೇಕು ಅಂತ ನೀವು ಅಲ್ಲಿ ಹೋಗೋದು. ಕೆಲವರಿಗೆ ಅರ್ಥವಾಗಬೇಕು ಅಂತ ನಿಮ್ಮ ಭಾಷೆಯಲ್ಲಿ ಹೇಳಿರೋದು. ಇಂತಹವರನ್ನು ವಿರೋಧಿಸದಿದ್ದರೆ ಮುಂದೆ ಇಸ್ರೇಲ್ ಪರಿಸ್ಥಿತಿ ನಿರ್ಮಾಣ ವಾಗುತ್ತೆ ಎಂದು ಹೇಳಿದರು.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


