ಬೆಳಗಾವಿ: ನಿನ್ನ ಬಳಿ ನಾನು ಸಾಲ (Money) ತಗೊಳಲ್ಲ ಎಂದು ಮಹಿಳೆಗೆ ಚಾಕು ಇರಿದ ಭೂಪನೊಬ್ಬ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಯನಾ ಪ್ರವೀಣ ಶೆಟ್ಟಿ(34) ಚಾಕು ಇರಿತಕ್ಕೊಳಗಾದ ಮಹಿಳೆಯಾಗಿದ್ದು, ಮಲ್ಲಿಕಾರ್ಜುನ ಕುಂಬಾರ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.ನಡೆದಿದ್ದೇನು..?: ಆರೋಪಿ ಮಲ್ಲಿಕಾರ್ಜುನ್ ಕಳೆದ ಒಂದು ವರ್ಷದ ಹಿಂದೆ ನಯನಾ ಪತಿಗೆ 1 ಲಕ್ಷ ಸಾಲ ನೀಡಿದ್ದ. ಸಾಲ ಪಡೆದ ಹಣವನ್ನು ನಯನಾ ಪತಿ ಪ್ರವೀಣ್ ಮತ್ತೆ ಮರಳಿ ಕೊಟ್ಟಿದ್ದರು. ಆಗ ಮಲ್ಲಿಕಾರ್ಜುನ್, ಮತ್ತೆ ಏನಾದರೂ ಸಾಲ ಬೇಕಾದರೆ ತೆಗೆದುಕೊಳ್ಳಿ ಎಂದಿದ್ದ. ಈ ವೇಳೆ ನಯನಾ, ನೀವು ಕೊಟ್ಟ ಹಣಕ್ಕೆ ಜಾಸ್ತಿ ಬಡ್ಡಿ ತೆಗೆದುಕೊಳ್ತಿರಿ ನಮಗೆ ಸಾಲ ಬೇಡ ಎಂದಿದ್ದರು. ಇದೇ ಕಾರಣಕ್ಕೆ ನಯನಾ ಮೇಲೆ ಆರೋಪಿ ಮಲ್ಲಿಕಾರ್ಜುನ್ ಸಿಟ್ಟಾಗಿದ್ದನು. ಇದನ್ನೂ ಓದಿ:ಕಳೆದ 2 ದಿನಗಳ ಹಿಂದೆ ನಯನಾ ಮೇಲೆ ಮಲ್ಲಿಕಾರ್ಜುನ್ ಮಾರಣಾಂತಿಕ ಹಲ್ಲೆ ನಡೆಸಿದ್ದನು. ನಂತರ ಮನೆಗೆ ಬಂದು ವಿಷ ಸೇವಿಸಿದ್ದನು. ಕೂಡಲೇ ಕುಟುಂಬಸ್ಥರು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


