ಕೊಪ್ಪಳ: ಗಂಗಾವತಿ (Gangavathi) ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಡಿಜೆ ಶಬ್ದದಿಂದ ಹೃದಯಾಘಾತಕ್ಕೆ ಒಳಗಾಗಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆಯ ವಿಚಾರವಾಗಿ ಪ್ರಶಾಂತ ನಗರದ ಪರಶುರಾಮ ಮಡ್ಡೇರ, ಬಸವರಾಜ್ ತಾವರಗೇರಾ, ರವಿ ಪವಾರಶೆಟ್ಟಿ, ಡಿಜೆ ಮಾಲೀಕ ಸಂತೋಷ್ ಮುಧೋಳ, ಡಿಜೆ ಆಪರೇಟರ್ ಬೆಳಗಾವಿಯ ರಾಮದುರ್ಗದ ಶಿವಸಾಗರ್ ಮತ್ತು ಡಿಜೆ ಟ್ರಾಕ್ಟರ್ ಮಾಲೀಕ ಅಶೋಕ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ಡಿಜೆ ಸಂಗೀತಕ್ಕೆ ಬಳಸುತ್ತಿದ್ದ ಉಪಕರಣ, ವಾಹನ ಸೇರಿ ಒಟ್ಟು 24 ಲಕ್ಷ ರೂ. ಮೌಲ್ಯದ ವಾಹನ ಮತ್ತು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಡಿಜೆ ಸದ್ದಿಗೆ ಯುವಕನಿಗೆ ಹೃದಯಾಘಾತಮೂರು ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, 10 ಲಕ್ಷ ರೂ. ಮೌಲ್ಯದ ಲಾರಿ, 3 ಲಕ್ಷ ರೂ. ಮೌಲ್ಯದ ಜನರೇಟರ್ ಹಾಗೂ 9 ಲಕ್ಷ ರೂ. ಮೌಲ್ಯದ ಡಿಜೆ ಸಂಗೀತದ ನಾನಾ ಮಾದರಿಯ ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಗಣೇಶನ ಹಬ್ಬದ ಅಂಗವಾಗಿ ಪ್ರಶಾಂತ ನಗರದ ಗಜಾನನ ಸಮಿತಿಯ ಸದಸ್ಯರು ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಅನುಮತಿ ಪಡೆಯದೇ ಡಿಜೆ ಬಳಕೆ ಮಾಡಿದ್ದಾರೆ ಎಂದು ಎಎಸ್‍ಐ ಸಿದ್ದರಾಮಯ್ಯ ಎಂಬವರು ದೂರು ನೀಡಿದ್ದಾರೆ.ಹೆಚ್ಚು ಶಬ್ದ ಮಾಡುವ ಸಾಧನಗಳನ್ನು ಬಳಸದಂತೆ ಸಾಕಷ್ಟು ಮುಂಚಿತವಾಗಿ ಪೊಲೀಸ್ ಠಾಣೆಯಲ್ಲಿ ಸಭೆ ಆಯೋಜಿಸಿ ಸೂಚನೆ ನೀಡಿದ್ದರು. ಬಳಿಕವೂ ಅನುಮತಿ ಇಲ್ಲದೇ ಡಿಜೆ ಬಳಕೆ ಮಾಡಿ ಜನರ ನೆಮ್ಮದಿಗೆ ಭಂಗ ತರುವ ಮತ್ತು ಶಬ್ದ ಮಾಲಿನ್ಯ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಪ್ರೀತಿಸಿ ಯುವತಿಗೆ ವಂಚನೆ, ಮೂರು ಬಾರಿ ಗರ್ಭಿಣಿ – ವೈದ್ಯ ಅರೆಸ್ಟ್Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


