ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಚಾಲನೆಗೆ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಮೊದಲ ಪ್ರೋಮೋ (Promo) ಕೂಡ ರಿವೀಲ್ ಆಗಿದೆ. ಬಿಗ್ ಬಾಸ್ ಮನೆ ಹೇಗಿದೆ ಎಂಬುದರ ಝಲಕ್ ಕೂಡ ತೋರಿಸಲಾಗಿದ್ದು, ನಟ ಕಮ್ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಖಡಕ್ ಡೈಲಾಗ್ ಹೊಡೆದು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.ದೊಡ್ಮನೆ ಆಟಕ್ಕೆ ಅಕ್ಟೋಬರ್ 8ರ ಸಂಜೆ 6ಕ್ಕೆ ಚಾಲನೆ ಸಿಗಲಿದೆ. ಬಿಗ್ ಬಾಸ್ ಮೊದಲ ಪ್ರೋಮೋನಲ್ಲಿ ಸುದೀಪ್ ಲುಕ್‌ ಜೊತೆ ಡೈಲಾಗ್ ಕೂಡ ಮೋಡಿ ಮಾಡ್ತಿದೆ. ಇದು ಬಿಗ್‌ಬಾಸ್ ಇತಿಹಾಸದಲ್ಲೇ ಫಸ್ಟ್ ಟೈಂ ಪ್ರೋಮೋ ಬಿಟ್ಟು, ವೀಕ್ಷಕರಿಗೆ ಕಿಚ್ಚು ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಡಗರಇಂದು ಕಿಚ್ಚ ಸುದೀಪ್, ಸ್ಪರ್ಧಿಗಳನ್ನು ದೊಡ್ಮನೆಗೆ ಪರಿಚಯ ಮಾಡಿಕೊಡುವ ಮೂಲಕ ಸ್ವಾಗತಿಸಲಿದ್ದಾರೆ. ಇದೀಗ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ರಿಲೀಸ್ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಕಿಚ್ಚು ಹಚ್ಚಿಸಿದೆ. ವಿಶೇಷ ಪ್ರೋಮೋದಲ್ಲಿ ಬಿಗ್ ಸರ್ಪ್ರೈಸ್ ಒಂದನ್ನು ನೀಡಲಾಗಿದೆ.ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಡಿಯನ್ಸ್ ಪೋಲ್‌ಗಳ ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯಲಿದೆ ಎಂದು ಪ್ರೊಮೋದಲ್ಲಿ ತಿಳಿಸಲಾಗಿದೆ. ಇದು ಹೇಗೆ ಇರುತ್ತದೆ ಅನ್ನೋದು ಇಂದು ಸಂಜೆಯೇ ಗೊತ್ತಾಗಲಿದೆ. ಸುದೀಪ್ ಅವರ ಡೈಲಾಗ್ ಕೂಡ ಗಮನ ಸೆಳೆದಿದೆ. ಒಂದು ರಾವಣ, 10 ತಲೆ, ಒಂದು ಮನೆ 10 ಸೀಸನ್ ಎಂದು ಸುದೀಪ್ ಡೈಲಾಗ್ ಹೊಡೆದಿದ್ದಾರೆ.ಬಿಗ್ ಬಾಸ್ ಸೀಸನ್ 10ಕ್ಕೆ ಅತಿಥಿಗಳಾಗಿ ಹಳೆಯ ಸೀಸನ್ ವಿನ್ನರ್‌ಗಳು ವೇದಿಕೆ ಏರಿದ್ದಾರೆ. ಹಿರಿಯ ನಟಿ ಶ್ರುತಿ, ಪ್ರಥಮ್, ಮಂಜು ಪಾವಗಡ, ಚಂದನ್ ಶೆಟ್ಟಿ ಈ ಶೋನಲ್ಲಿ ಹೈಲೆಟ್ ಆಗಿದ್ದಾರೆ. ಒಟ್ನಲ್ಲಿ ಈ ಸೀಸನ್ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.ದೊಡ್ಮನೆಗೆ ಈಗಾಗಲೇ ನಮ್ರತಾ ಗೌಡ (Namratha Gowda), ನೀತು ವನಜಾಕ್ಷಿ, ರಕ್ಷಕ್ ಬುಲೆಟ್, ಸ್ನೇಕ್ ಶ್ಯಾಮ್, ಈಶಾನಿ ಸೇರಿದಂತೆ ಹಲವರು ಕಾಲಿಟ್ಟಿದ್ದಾರೆ. 





















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


