ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಯಾರೆಲ್ಲಾ ಸೆಲೆಬ್ರಿಟಿಗಳು ಈ ಬಾರಿ ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮನೆ ಮಾಡಿದೆ. ಹೀಗಿರುವಾಗ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ದೊಡ್ಮನೆಗೆ ಕಾಲಿಡುವ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ರಾಜೇಶ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಹೋಗುತ್ತಿಲ್ಲ: ನಟಿ ರಂಜನಿ ರಾಘವನ್ ಸ್ಪಷ್ಟನೆಬಿಗ್ ಬಾಸ್‌ಗೆ ಬರಲಿರುವ ಅಂದಾಜಿಸಲ್ಪಟ್ಟ ಸ್ಪರ್ಧಿಗಳ ಪಟ್ಟಿಯಲ್ಲಿ ನನ್ನ ಹೆಸರು ಚಾಲ್ತಿಯಲ್ಲಿದೆ ಅಂತಾ ತುಂಬಾ ಜನ ವಿಶ್ ತಿಳಿಸುತ್ತಾ ಇದ್ದೀರಿ, ಆದರೆ ನಾನು ಬಿಗ್ ಬಾಸ್‌ ಶೋಗೆ ಹೋಗುತ್ತಿಲ್ಲ. ಅದಕ್ಕೆ ಕಾರಣ ಕಿರುತೆರೆಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಸಕ್ರಿಯ ಆಗಿದ್ದೀನಿ, ಉಳಿದೆಲ್ಲ ಮಾಹಿತಿ ಶೀಘ್ರದಲ್ಲಿ ತಿಳಿಸುವೆ. ನಿಮ್ಮ ಹಾರೈಕೆ- ಪ್ರೀತಿ ಸದಾ ನನ್ನ ಜೊತೆಯಿರಲಿ, ಧನ್ಯೋಸ್ಮಿ ಎಂದು ರಾಜೇಶ್ ಧ್ರುವ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಹೋಗುವ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ.ಜನಪ್ರಿಯ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ರಾಜೇಶ್ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು. ಅವರ ಪಾತ್ರ ಪ್ರೇಕ್ಷರ ಗಮನ ಸೆಳೆದಿತ್ತು. ನಾಯಕ ನಟ ಸಿದ್ಧಾರ್ಥ್ ಪಾತ್ರದಷ್ಟೇ ಇವರ ಪಾತ್ರ ಕೂಡ ಹೈಲೆಟ್ ಆಗಿತ್ತು.ಸರಯೂ, ಅರಮನೆ ಗಿಳಿ, ಸೇರಿದಂತೆ ಹಲವು ಸೀರಿಯಲ್ ಮತ್ತು ರಿಯಾಲಿಟಿ ಶೋನಲ್ಲಿ ರಾಜೇಶ್ ಕಾಣಿಸಿಕೊಂಡಿದ್ದಾರೆ. ‘ಶ್ರೀ ಬಾಲಾಜಿ ಸ್ಟುಡಿಯೋ’ ಚಿತ್ರದ ಮೂಲಕ ನಟ ಗಮನ ಸೆಳೆದಿದ್ದರು. ಈ ಚಿತ್ರ ಮಲಯಾಳಂ ಭಾಷೆಯಲ್ಲೂ ಡಬ್ ಆಗಿದೆ. 





















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


