ಹಾವೇರಿ: ರಕ್ತದಾನ (Blood Donate) ಶಿಬಿರ ಆಯೋಜಿಸಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ಹೋರಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಘಟನೆ ಹಾವೇರಿಯ (Haveri) ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸಿದ್ದಲಿಂಗೇಶ ವಾಲಿ ಎಂಬವರಿಗೆ ಸೇರಿದ ಹೋರಿ ಇದಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ಈ ಹೋರಿಯನ್ನು ಒಂದು ಲಕ್ಷ ರೂ. ಕೊಟ್ಟು ತಮಿಳುನಾಡಿನಿಂದ ತಂದಿದ್ದರು. ಬಳಿಕ ಹೋರಿಗೆ ರಾಕ್ಷಸ 220 ಎಂದು ಹೆಸರು ಇಟ್ಟಿದ್ದರು. ಹೋರಿ ಹಬ್ಬದಲ್ಲಿ (Hori Habba) ಕೊಬ್ಬರಿ ಕಟ್ಟಿ ಓಡಿಸುವ ಸಲುವಾಗಿಯೇ ಇದನ್ನು ತಂದಿದ್ದರು. ಅಂತೆಯೇ ಹೋರಿ ಹಬ್ಬದಲ್ಲಿಯೂ ಒಳ್ಳೆಯ ಹೆಸರು ಮಾಡಿತ್ತು. ಇದನ್ನೂ ಓದಿ: ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಲ್ಲ ಅಂತಿದ್ದಾರೆ ಸಿಎಂ-ಉದ್ಯೋಗ ಸೃಷ್ಟಿಯ ಚಿಂತನೆಯಿದೆ ಅಂತಿದ್ದಾರೆ ಡಿಸಿಎಂಹೋರಿ ಹಬ್ಬದಲ್ಲಿ ಅಲಂಕಾರದಲ್ಲಿ ರಾಕ್ಷಸನ ಅವತಾರ ತಾಳಿದಂತೆ ಅಖಾಡದಲ್ಲಿ ಧೂಳೆಬ್ಬಿಸಿ ಓಡಿ ಜನರ ಮನೆ ಮಾತಾಗಿದೆ. ಅಖಾಡದಿಂದ ಹೊರಗೆ ಬಂದರೆ ಅತ್ಯಂತ ಮೃದು ಸ್ವಭಾವ ಹೊಂದಿದೆ. ಹೀಗಾಗಿ ಹೋರಿಗೆ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ರಾಕ್ಷಸ ಎಂದು ಹೆಸರು ನಾಮಕರಣ ಮಾಡಿದ್ದರು. ಅಖಾಡದಲ್ಲಿ ಶರವೇಗದ ಓಟ ಓಡಿ ಸಾಕಷ್ಟು ಬಹುಮಾನಗಳನ್ನು ಇದು ಪಡೆದುಕೊಂಡಿದೆ.ಹೀಗಾಗಿ ಹೋರಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮೂರು ವರ್ಷಗಳಿಂದ ಹೋರಿ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ ಮಾಡಲಾಗುತ್ತಿದೆ. ಕಳೆದ ವರ್ಷ 60ಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ರೆ ಕಾಂಗ್ರೆಸ್ ಅದನ್ನು ಹೊಲಿಯುತ್ತಿದೆ: ಡಿಕೆಶಿWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


