ಬೆಂಗಳೂರು: ಬಿಜೆಪಿ (BJP) ಅವರಿಗೆ ಕೆಲಸ ಇಲ್ಲ. ಹೀಗಾಗಿ ಶಿವಮೊಗ್ಗ ಗಲಭೆಗೆ ಸತ್ಯ ಶೋಧನ ಸಮಿತಿ ಅಂತ ಪ್ರವಾಸಕ್ಕೆ ಹೊರಟಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadai) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯಿಂದ ಶಿವಮೊಗ್ಗ ಗಲಭೆಗೆ ಸತ್ಯ ಶೋಧನ ಸಮಿತಿ ಹೋಗಿರುವ ವಿಚಾರವಾಗಿ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಇಂತಹ ಕೆಲಸಗಳನ್ನೇ ಮಾಡೋದು. ಬಿಜೆಪಿ (BJP) ಅವರಿಗೆ ಬೇರೆ ಕೆಲಸ ಇಲ್ಲ. ಚುನಾವಣೆಗಳು ಬಂದಾಗ ಬಿಜೆಪಿ ಅವರಿಗೆ ಪಾಕಿಸ್ತಾನ (Pakistan), ಹಿಂದೂ ಧರ್ಮ, ಗಣೇಶ, ಅಂಜನಾದ್ರಿ ಬೆಟ್ಟ, ಮಸೀದಿ ನೆನಪು ಆಗುತ್ತದೆ ಅಂತ ಕಿಡಿಕಾರಿದರು.ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಆಯ್ತು. ಆಗ ಬಿಜೆಪಿ ಸರ್ಕಾರ ಏನು ಮಾಡುತ್ತಿತ್ತು?. ಚುನಾವಣೆ ಬಂದಾಗ ಮಾತ್ರ ಇಂತಹ ವಿಷಯ ಇವರಿಗೆ ನೆನಪು ಆಗುತ್ತದೆ. ಉಳಿದ ಟೈಂ ನಲ್ಲಿ ಯಾರಿಗೂ ನೆನಪಾಗೊಲ್ಲ. ಬಿಜೆಪಿ ಅವರು ಮಾತ್ರ ಹಿಂದುಗಳಾ? ನಾವು ಹಿಂದುಗಳು ಅಲ್ಲವಾ? ಕಾಂಗ್ರೆಸ್ ನಲ್ಲಿ ಹಿಂದುಗಳು ಇಲ್ಲವಾ ಅಂತ ವಾಗ್ದಾಳಿ ನಡೆಸಿದರು.ಚುನಾವಣೆ ಬಂದಾಗ ಸಿಟಿ ರವಿ, ಕಟೀಲಿಗೆ ಹಿಂದೂಗಳು ನನೆಪಿ ಆಗುತ್ತಾರೆ. ಅಂಜನಾದ್ರಿ ಬೆಟ್ಟದ ನೆನಪು ಆಗುತ್ತದೆ.ಬಿಜೆಪಿ ಅವರು ಅಂಜನಾದ್ರಿ ಬೆಟ್ಟಕ್ಕೆ ಎಷ್ಟು ಹಣ ಕೊಟ್ಟರು. ಅವರ ಏನ್ ಅಭಿವೃದ್ಧಿ ಮಾಡಿದ್ರು?. ಏನು ಮಾಡಿಲ್ಲ.ಅವರು ಸುಳ್ಳು ಹೇಳ್ತಾರೆ. ನಾವು ಸತ್ಯ ಹೇಳ್ತೀವಿ. ಇವೆಲ್ಲ ಚುನಾವಣೆ ಗಿಮಿಕ್ ಅಷ್ಟೆ ಅಂತ ವಾಗ್ದಾಳಿ ನಡೆಸಿದರು.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 




















Sign in to your account
Username or Email Address


Password

 Remember Me


