ವಿಜಯಪುರ: ಜಾತ್ರಾ ರಥೋತ್ಸವದ (Rathotsava) ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ (Youth) ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ (Devara Hipparagi) ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ದೇವೇಂದ್ರ ಬಡಿಗೇರ್ (24) ಮೃತ ದುರ್ದೈವಿ. ಘನ ಗುರುಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ದುರಂತದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ರೆ ಆಧಾರ್‌ ಕಾರ್ಡ್‌ ಇಲ್ಲ: ಅಸ್ಸಾಂ ಸಿಎಂ ಘೋಷಣೆರಥವನ್ನು ಎಳೆಯುವ ವೇಳೆ ಯುವಕ ಆಯತಪ್ಪಿ ಚಕ್ರದ ಅಡಿಗೆ ಸಿಲುಕಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ದೇವೇಂದ್ರ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ


 Advertisement 







 Advertisement 




Sign in to your account
Username or Email Address


Password

 Remember Me


