ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‍ಶೀಟ್‍ನಲ್ಲಿ ಬಗೆದಷ್ಟು ಸ್ಫೋಟಕ ಮಾಹಿತಿ ಅನಾವರಣಗೊಳ್ಳುತ್ತಿದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಂತೆ ಪವಿತ್ರಾಗೌಡಗೆ ನಟ ದರ್ಶನ್ ಪ್ರಚೋದನೆ ನೀಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.ಜೂ.8 ರಂದು ಪವಿತ್ರಾಗೌಡಗೆ ಕರೆ ಮಾಡಿದ್ದ ದರ್ಶನ್, ನಿಂಗೆ ಕಾಟ ಕೊಡುತ್ತಿದ್ದವನನ್ನು ನಮ್ಮವರು ಎತ್ತಾಕ್ಕೊಂಡು ಬಂದಿದ್ದಾರೆ. ಪಟ್ಟಣಗೆರೆ ಶೆಡ್‍ಗೆ ಹೋಗೋಣ ಬಾ. ನಿನ್ನನ್ನು ಕರ್ಕೊಂಡು ಹೋಗ್ತೀನಿ. ರೇಣುಕಾಸ್ವಾಮಿಗೆ ಹೊಡೆದು, ಬುದ್ದಿ ಕಲಿಸಿ ಕೋಪ ಕಡಿಮೆ ಮಾಡಿಕೋ ಎಂದಿದ್ದರು.ಬಳಿಕ ದರ್ಶನ್ ಮತ್ತು ಪವಿತ್ರಾಗೌಡ ಇಬ್ಬರು ಶೆಡ್‍ಗೆ ಬರುವಷ್ಟರಲ್ಲಿ ರೇಣುಕಾಸ್ವಾಮಿ ರಕ್ತದ ಮಡುವಿನಲ್ಲಿದ್ದ. ಈ ವೇಳೆ ಸಿಟ್ಟಿನಲ್ಲಿದ್ದ ಪವಿತ್ರಾಗೌಡ, ಅದಾಗಲೇ ತೀವ್ರ ಗಾಯಗಳಿಂದ ನರಳ್ತಿದ್ದ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ರಪರಪ ಬಾರಿಸಿದ್ದರು. ನಿನ್ನ ಮುಗಿಸಲು ಕಾಯ್ತಿದ್ದೆ. ನನಗೇ ಅಶ್ಲೀಲ ಮೆಸೇಜ್ ಕಳಿಸ್ತೀಯಾ? ಬೆತ್ತಲೆ ಫೋಟೋ ಕಳಿಸಿ ಮುಜುಗರ ಮಾಡ್ತೀಯಾ? ದುಡ್ಡು ಕೊಟ್ಟು ಸಾಕ್ತೀನಿ ಅಂತಿಯಾ ಎಂದು ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದರು.ಈ ವೇಳೆ, ತಪ್ಪಾಯ್ತು ಕ್ಷಮಿಸಿ ಎಂದು ಪವಿತ್ರಾಗೌಡ ಕಾಲಿಗೆ ಬಿದ್ದು ರೇಣುಕಾಸ್ವಾಮಿ ಬೇಡಿಕೊಂಡಿದ್ದ. ಆದ್ರೂ, ಇದಕ್ಕೆ ಕರಗದ ಪವಿತ್ರಾಗೌಡ, ಕಿಲ್ ಹಿಮ್ ಎಂದು ಆದೇಶ ಕೊಟ್ಟಿದ್ದರು. ಇದೇ ಈಗ ಪವಿತ್ರಾಗೌಡಗೆ ಮುಳುವಾಗಿದೆ. ಪವಿತ್ರಾಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ. ಈ ಮಧ್ಯೆ, ಅಪರೂಪ ಎಂಬಂತೆ ಈ ಪ್ರಕರಣದಲ್ಲಿ ಮಣ್ಣು ಕೂಡ ಸಾಕ್ಷ್ಯವಾಗಿದೆ. ದರ್ಶನ್ ಗ್ಯಾಂಗ್‍ನ ಚಪ್ಪಲಿ, ಶೂಗಳಿಗೆ ಅಂಟಿದ್ದ ಮಣ್ಣನ್ನು ಸಂಗ್ರಹಿಸಿದ್ದ ಪೊಲೀಸರು, ಶೆಡ್ ಮಣ್ಣಿನ ಜೊತೆ ತಾಳೆ ಮಾಡಿಸಿದ್ದಾರೆ. ಅಲ್ಲಿಗೆ ಈ ಗ್ಯಾಂಗ್ ಶೆಡ್‍ಗೆ ಹೋಗಿದ್ದು ಸಾಬೀತಾಗಿತ್ತು ಎಂಬ ವಿಚಾರ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆSign in to your account
Username or Email Address


Password

 Remember Me


