ತುಮಕೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕುಣಿಗಲ್ ನಲ್ಲಿ ಕಳೆದ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯತ್ನದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ.ಕುಣಿಗಲ್ ಪಟ್ಟಣದ ನಿವಾಸಿಗಳಾದ ಆಟೋ ಕುಮಾರ ಹಾಗೂ ಸೊಹೈಲ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿರುತ್ತದೆ. ಈ ಸೇಡು ತೀರಿಸಿಕೊಳ್ಳಲು ಸೊಹೈಲ್ ಹೊಂಚುಹಾಕುತ್ತಿದ್ದ. ಒಂದು ವಾರದ ಹಿಂದೆ ಆಟೋಕುಮಾರ ಪೋಸ್ಟ್ ಆಫೀಸ್ ಬಳಿಯ ವೈನ್ ಶಾಪ್ ಬಳಿ ನಿಂತಾಗ ಸೊಹೈಲ್ ಚಾಕುವಿನಿಂದ ಕುಮಾರನ ಹೊಟ್ಟೆಗೆ ಇರಿಯುತ್ತಾನೆ. ಈ ವೇಳೆ ಅವರಿಬ್ಬರ ಮಧ್ಯೆ ಗುದ್ದಾಟ ನಡೆಯುತ್ತಿದೆ. ಕೂಡಲೇ ಸ್ಥಳಿಯರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಗಂಭೀರವಾಗಿ ಗಾಯಗೊಂಡ ಕುಮಾರನಿಗೆ ಸದ್ಯ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.Sign in to your account
Username or Email Address


Password

 Remember Me


