ಮಂಡ್ಯ: 2 ತಲೆ ಹಾಗೂ 4 ಕಣ್ಣಿನ ವಿಚಿತ್ರ ಕುರಿಮರಿಯೊಂದು ಮಂಡ್ಯದಲ್ಲಿ ಜನನವಾಗಿದ್ದು, ಇದೀಗ ಸಾರ್ವಜನಿಕರ ಕುತೂಹಲ ಕೆರಳಿಸಿದೆ.ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ, ನಂಜೇಗೌಡನದೊಡ್ಡಿ ಗ್ರಾಮದ ನಂಜಪ್ಪ ಎಂಬುವವರ ಮನೆಯಲ್ಲಿ ಈ ವಿಚಿತ್ರ ಕುರಿ ಜನನವಾಗಿದೆ. ಕುರಿ ಆರೋಗ್ಯವಾಗಿದ್ದು ತಾಯಿಯ ಹಾಲು ಕುಡಿಯುತ್ತಿದೆ. ಅದರಲ್ಲೂ ತನ್ನ ಎರಡೂ ಬಾಯಿಯಿಂದಲೂ ಕುರಿ ಹಾಲು ಕುಡಿಯುತ್ತಿರುವುದು ವಿಶೇಷವಾಗಿದೆ. ಆದ್ರೆ ತಲೆ ದಪ್ಪಗಿರುವುದರಿಂದ ಕುರಿಗೆ ಸ್ವಶಕ್ತಿಯಿಂದ ನಿಲ್ಲಲು ಕಷ್ಟವಾಗುತ್ತಿದೆ.ವಿಚಿತ್ರ ಕುರಿಯ ಜನನದ ಬಗ್ಗೆ ವಿಷ್ಯ ತಿಳಿದ ಗ್ರಾಮಸ್ಥರು, ನಂಜಪ್ಪ ಮನೆಗೆ ಆಗಮಿಸಿ, ಕುರಿ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.Sign in to your account
Username or Email Address


Password

 Remember Me


