ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಗೋಪುರಕ್ಕೆ ಸಿಡಿಲು ಬಡಿದು ಅಲ್ಪ ಪ್ರಮಾಣ ಹಾನಿ ಸಂಭವಿಸಿದೆ.ದೇವಸ್ಥಾನದ ಸುತ್ತಮುತ್ತಲಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು, ಮಿಂಚು ಸಹಿತ ತುಂತುರು ಮಳೆಯಾಗುತ್ತಿದ್ದು ಅಲ್ಲಲ್ಲಿ ಸಿಡಿಲು ಹೊಡೆದಿದೆ. ಸಿಡಿಲಿನ ತೀವ್ರತೆಗೆ ಗೋಪುರ ಒಂದು ಭಾಗದ ಸಿಮೆಂಟ್ ತುಂಡು ಕಿತ್ತು ಹೋಗಿದೆ. ಉಳಿದಂತೆ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ.ಕುಕ್ಕೆ ಸುತ್ತಮುತ್ತಲಿನ ಊರಿನ ಕೆಲವೊಂದು ಮನೆಗಳಿಗೂ ಸಿಡಿಲು ಬಡಿದಿದ್ದು ಅಲ್ಪ ಪ್ರಮಾಣದ ಹಾನಿಯಾಗಿರುವ ವಿಚಾರ ತಿಳಿದು ಬಂದಿದೆ.Sign in to your account
Username or Email Address


Password

 Remember Me


