ತುಮಕೂರು: ಒಂದೇ ಹೆಸರು, ಒಂದೇ ಜನ್ಮ ದಿನಾಂಕದಿಂದಾಗಿ ಕರ್ನಾಟಕದ ಯುವಕನೊಬ್ಬ ಸೌದಿ ಅರೇಬಿಯಾದಲ್ಲಿ ಕಾನೂನು ಜಂಜಾಟದಲ್ಲಿ ಸಿಲುಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಸುಬ್ರಹ್ಮಣ್ಯ ನಿವಾಸಿ ನಯಾಜ್ ಅಹಮದ್ ಸೌದಿಯಲ್ಲಿ ಬಂಧಿಯಾಗಿದ್ದಾರೆ.ನಯಾಜ್ ಹೆಸರಿನ ಬೆಂಗಳೂರು ಮೂಲದವನು ಎನ್ನಲಾದ ಯುವಕನೋರ್ವ ಸೌದಿಯಲ್ಲಿ ಅಪರಾಧವೆಸಗಿ ಪರಾರಿಯಾಗಿದ್ದು ತುರುವೇಕೆರೆ ಮತ್ತು ಬೆಂಗಳೂರು ಯುವಕರಿಬ್ಬರ ಹೆಸರು, ಹುಟ್ಟಿದ ದಿನಾಂಕ ಪಾಸ್ ಪೋರ್ಟ್ ನೊಂದಣಿ ಎಲ್ಲವೂ ಹೊಂದಾಣಿಕೆ ಆಗಿದೆ. ಹಾಗಾಗಿ ತುರುವೇಕೆರೆ ಮೂಲದ ನಯಾಜ್‍ನನ್ನು ಸೌದಿ ಪೊಲೀಸರು ವಿಚಾರಣೆಗಾಗಿ ಬಂಧಿಸಿದ್ದಾರೆ.ಕಳೆದ ಏಪ್ರಿಲ್ 20ರಂದು ನಯಾಜ್ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಏರ್ ಪೋರ್ಟ್ ತನಿಖಾಧಿಕಾರಿಗಳು ಕೆಲವೊಂದು ಮಾಹಿತಿ ಬೇಕು ಅಂತಾ ಹೇಳಿ ಬಂಧಿಸಿದ್ದಾರೆ. ಆದ್ರೆ ಒಂದು ತಿಂಗಳು ಕಳೆದರೂ ಇನ್ನೂ ಬಿಡುಗಡೆ ಮಾಡಿಲ್ಲ ಅಂತಾ ನಗರದ ಮೌಲಿಯೊಬ್ಬರು ಪತ್ರಿಕಾಗೋಷ್ಟಿ ನಡೆಸಿ ತಮ್ಮ ನೋವನ್ನು ಅಲವತ್ತುಕೊಂಡಿದ್ದಾರೆ.Sign in to your account
Username or Email Address


Password

 Remember Me


