ಧಾರವಾಡ: ಕೃಷಿ ಹೊಂಡದಲ್ಲಿ ಈಜಲು ಹೋದ ಯುವನೋರ್ವ ಮುಳುಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.22 ವರ್ಷದ ಮಲ್ಲಿಕಾರ್ಜುನ್ ಕಳಸಣ್ಣವರ ಮೃತ ಯುವಕ. ಮಲ್ಲಿಕಾರ್ಜುನ ತನ್ನ ಇತರ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ. ಕೃಷಿ ಹೊಂಡದಲ್ಲಿ ಹೂಳು ತುಂಬಿಕೊಂಡಿದ್ದನ್ನು ಗಮನಿಸದ ಮಲ್ಲಿಕಾರ್ಜುನ ಏಕಾಏಕಿ ಹೊಂಡಕ್ಕೆ ಜಿಗಿದಿದ್ದಾನೆ. ಇದರಿಂದ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡ ಮಲ್ಲಿಕಾರ್ಜುನ ಮೇಲೆ ಬರಲು ಆಗದೇ ಮುಳುಗಿ ಸಾವನ್ನಪ್ಪಿದ್ದಾನೆ.ಮಲ್ಲಿಕಾರ್ಜುನ್ ಜೊತೆಯಲ್ಲಿದ್ದ ಸ್ನೇಹಿತರು ಆತನನ್ನು ಪೈಪ್ ಕೊಟ್ಟು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಪೈಪ್ ಮಲ್ಲಿಕಾರ್ಜುನನಿಗೆ ತಾಗದ ಕಾರಣ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ. ಕಳೆದರೆಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿಕೊಂಡಿತ್ತು. ಹಾಗಾಗಿ ಯುವಕರು ಕೃಷಿ ಹೊಂಡಕ್ಕೆ ಯುವಕರು ತೆರಳಿದ್ದರು.ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


