ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ನಗರದಲ್ಲಿ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೋರಮಂಗಲದಲ್ಲಿರುವ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಕುಮಾರ್ ಹೆಬ್ಬಾಳದ ಸ್ನೇಹಿತನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಉತ್ತರ ಕನ್ನಡ ಮೂಲದ ಸುನೀಲ್ ಕುಮಾರ್ ಕಳೆದ 1 ವರ್ಷದಿಂದ ಕೋಲ್ಕತ್ತ ಮೂಲದ ಸಹೋದ್ಯೋಗಿ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಸುನೀಲ್ ಕುಮಾರ್ ಸ್ನೇಹಿತನ ಪ್ರೀತಿಗೆ ಆಕೆ ಬಿದ್ದಿದ್ದಳು.ಪ್ರೇಯಸಿ ಕೈ ಕೊಟ್ಟಿದ್ದಕ್ಕೆ ಸುನೀಲ್ ಕುಮಾರ್ ಖಿನ್ನತೆಗೆ ಒಳಗಾಗಿದ್ದರು. ಈ ವಿಚಾರವನ್ನು ತನ್ನ ಸ್ನೇಹಿತರ ಜೊತೆಗೂ ಹೇಳಿಕೊಂಡಿದ್ದರು. ಆದರೆ ಶುಕ್ರವಾರ ರಾತ್ರಿ ಸ್ನೇಹಿತ ಮನೆಗೆ ಬಂದಿದ್ದ ಸುನೀಲ್ ಕುಮಾರ್ ಅಲ್ಲೇ ನೇಣಿಗೆ ಶರಣಾಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


