ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾಮ ಪಂಚಾಯ್ತಿ ವಾಪ್ತಿಯಲ್ಲಿ ಬೆಚ್ಚಿಬೀಳುವ ಘಟನೆ ನಡೆದಿದೆ. ಬಡಪಾಯಿ ಸೊಸೆ ಮೇಲೆ ಅತ್ತೆ, ಮಾವ, ಮೈದುನರಿಂದಲೇ ಹೇಯ ಕೃತ್ಯ ನಡೆದಿದೆ.ಸೊಸೆ ಗೌರಿ ಪಕೀರ ಸಿದ್ದಿ ಮನೆಯವರಿಂದಲೇ ಹಲ್ಲೆಗೊಳಗಾದ ಮಹಿಳೆ. ಮಗನ ಹೆಸರಲ್ಲಿದ್ದ ಆಶ್ರಯ ಮನೆ ತಮ್ಮ ಹೆಸರಿಗೆ ಬರೆಸಬೇಕೆಂದು ಅತ್ತೆ ರೀಟಾ, ಮಾವ ಜೂಜೆ ಮತ್ತು ಮೈದುನ ಶಿವ ಮೂವರು ಸೇರಿ ಗೌರಿ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ.ಗೌರಿ ಪತಿ ಪಕೀರ್ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಸೊಸೆಯನ್ನ ಕಟ್ಟಿ ಹಾಕಿ ಕಣ್ಣುಗಳಿಗೆ ಖಾರದ ಪುಡಿ ಎರಚಿ ಕಿರುಕುಳ ನೀಡಿದ್ದಾರೆ. ಇನ್ನೂ ಮೃಗರೂಪಿ ಮಾವ ಮತ್ತು ಮೈದುನ ಗೌರಿಯವರ ಗುಪ್ತಾಂಗಗಳನ್ನ ಕಚ್ಚಿ ಗಾಯಗೊಳಿಸಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಗೌರಿ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತನ್ನ ಪತ್ನಿಯ ಮೇಲೆ ಹಲ್ಲೆಯನ್ನು ಖಂಡಿಸಿ ಫಕೀರ್ ಯಲ್ಲಾಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಗೌರಿ ಅವರ ಅತ್ತೆ, ಮಾವ ಮತ್ತು ಮೈದುನ ನಾಪತ್ತೆಯಾಗಿದ್ದಾರೆ. Sign in to your account
Username or Email Address


Password

 Remember Me


