ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶನಿವಾರ ರಾತ್ರಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲಿನ ಜೊತೆ ಗಾಳಿಯೂ ಬೀಸಿದ್ದರಿಂದ ಸಂಚಾರ ಬಹುತೇಕ ಅಸ್ತವ್ಯಸ್ತಗೊಂಡಿದೆ.ರಾತ್ರಿ 8.30 ರಿಂದ ಒಂದು ಗಂಟೆಗಳ ಕಾಲ ಜೋರಾಗಿ ಮಳೆಯಾಗಿದೆ. ನ್ಯೂ ಬಿಇಎಲ್ ರೋಡ್‍ನಲ್ಲಿ ಭಾರೀ ಮಳೆಯಿಂದ ಎದೆ ಎತ್ತರಕ್ಕೆ ನೀರು ಬಂದಿದ್ದು, ರಸ್ತೆಯಲ್ಲಿ ಕಾರು ಮುಳುಗಿತ್ತು. ಯಶವಂತಪುರ ಬಸ್ ಸ್ಟ್ಯಾಂಡಿನ ಒಳಗಡೆ ನೀರು ನುಗ್ಗಿದೆ.ಹೆಬ್ಬಾಳ ರಿಂಗ್ ರೋಡ್‍ನಲ್ಲಿ ನಾಲ್ಕು ಮರಗಳು ಧರೆಗೆ ಬಿದ್ದಿದ್ದು, ಟ್ರಾಫಿಕ್ ಪೊಲೀಸರು ಮರಗಳನ್ನು ತೆರವುಗೊಳಿಸಿದ್ದಾರೆ.ಗಾಳಿಯಿಂದ ಹಲವೆಡೆ ಬೃಹತ್ ಮರಗಳು ಧರೆಗೆ ಬಿದ್ದಿದ್ದು, ಕೆಲವೆಡೆ ಟ್ರಾಫಿಕ್ ಜಾಮ್ ಆಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. Sign in to your account
Username or Email Address


Password

 Remember Me


