ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯ ಮತ್ತು ಬೆಂಬಲಿಗರು ಕೊಳ್ಳೆಗಾಲದ ಕೃಷಿ ಇಲಾಖೆಯ ಕಚೇರಿಗೆ ನುಗ್ಗಿ ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಿಲ್ಲೆಯಕುಂತೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಎಲ್.ನಾಗರಾಜು ಮತ್ತು ಬೆಂಬಲಿಗರು ಕೊಳ್ಳೆಗಾಲದ ಸಹಾಯಕ ಕೃಷಿ ಇಲಾಖೆಯ ಕಚೇರಿಗೆ ನುಗ್ಗಿ ಸಹಾಯಕ ನಿರ್ದೇಶಕ ಬಿ.ಎಸ್.ಮಹದೇವಯ್ಯ ಹಾಗೂ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಉಮಾಶಂಕರ್ ಎಂಬ ಡಿ.ದರ್ಜೆಯ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ.ಮಾಹಿತಿ ಹಕ್ಕಿನಡಿ ಸರಿಯಾದ ಮಾಹಿತಿ ನೀಡಿಲ್ಲವೆಂದು ಆರೋಪಿಸಿ ಡಿ ದರ್ಜೆ ನೌಕರನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಉಪನಿರ್ದೇಶಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ತಮ್ಮ ಬಳಿಯಿರುವ ದಾಖಲೆಗಳನ್ನು ನೀಡಿದ್ದೇವೆ ಎಂದು ತಿಳಿಸಿದ್ರೂ ನಮ್ಮ ಹಲ್ಲೆ ನಡೆಸಿದ್ದಾರೆ ಎಂದು ಸಹಾಯಕ ನಿರ್ದೇಶಕ ಎಲ್.ಮಹದೇವಯ್ಯ ಹೇಳಿದ್ದಾರೆ.ಎಲ್.ನಾಗರಾಜು ಸೇರಿದಂತೆ ಐವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಸಹಾಯಕ ನಿರ್ದೇಶಕ ಎಲ್.ಮಹದೇವಯ್ಯ ದೂರು ದಾಖಲಿಸಿದ್ದಾರೆ. ಇನ್ನೂ ಹಲ್ಲೆಗೊಳಗಾದ ಡಿ ದರ್ಜೆ ನೌಕರ ಉಮಾಶಂಕರ್ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  Sign in to your account
Username or Email Address


Password

 Remember Me


