ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ನೋಟಿಸ್ ಜಾರಿಯಾಗಿದೆ ಎಂದು ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ವಿಶೇಷ ತನಿಖಾ ತಂಡ ಇಂದು ಖುದ್ದು ಹಾಜರಾಗುವಂತೆ ಹರ್ಷ ಗುಪ್ತಾಗೆ ಸೂಚನೆ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.ಶನಿವಾರ ತಿವಾರಿ ಸತ್ಯ ಹೆಸರಿನಲ್ಲಿ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ಪ್ರಸಾರ ಮಾಡಿತ್ತು. ಈ ವೇಳೆ ಯಶ್ ಗುಪ್ತಾ ಹೆಸರಿನ ಅಧಿಕಾರಿ ಹೆಸರನ್ನು ಅನುರಾಗ್ ಸಹೋದರ ಮಯಾಂಕ್ ತಿಳಿಸಿದ್ದರು. ಈ ಸುದ್ದಿಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷ ಗುಪ್ತಾ ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.ಈ ನಡುವೆ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿ ನಡೆಸಬೇಕೆಂದು ಆಗ್ರಹಿಸಿ ಪ್ರಧಾನಿ ಕಚೇರಿಗೆ ಅನುರಾಗ್ ಕುಟುಂಬ ಪತ್ರ ಬರೆದಿದೆ.ಇದನ್ನೂ ಓದಿ: Exclusive: ಅನುರಾಗ್ ತಿವಾರಿಗೆ ಇತ್ತು ಜೀವ‌ ಭಯ- 4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ Sign in to your account
Username or Email Address


Password

 Remember Me


